ಭಾನುವಾರ, ಡಿಸೆಂಬರ್ 8, 2019
21 °C

ಮುಸ್ಲಿಂ ಕುಟುಂಬದ ಮೇಲೆ ರೈಲಿನಲ್ಲಿ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಸ್ಲಿಂ ಕುಟುಂಬದ ಮೇಲೆ ರೈಲಿನಲ್ಲಿ ಹಲ್ಲೆ

ಲಖನೌ: ಹರಿಯಾಣದಲ್ಲಿ ರೈಲಿನಲ್ಲಿ ಮುಸ್ಲಿಂ ಬಾಲಕನೊಬ್ಬನನ್ನು ಇರಿದು ಕೊಂದ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದ ಮಣಿಪುರಿ ಜಿಲ್ಲೆಯಲ್ಲಿ ಮುಸ್ಲಿಂ ಕುಟುಂಬವೊಂದರ ಮೇಲೆ ಹಲ್ಲೆ ನಡೆಸಲಾಗಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.

ಫರೂಕಾಬಾದ್‌–ಶಿಕೋಬಾದ್‌ ನಡುವಣ ರೈಲಿನಲ್ಲಿ ಬುಧವಾರ ರಾತ್ರಿ ಈ ಹಲ್ಲೆ ನಡೆದಿದೆ. ಈ ಸ್ಥಳ ಲಖನೌದಿಂದ 300 ಕಿ.ಮೀ ದೂರದಲ್ಲಿದೆ.

ಭೋಗಾಂವ್‌ ಎಂಬಲ್ಲಿ ರೈಲಿಗೆ ಏರಿದ ದುಷ್ಕರ್ಮಿಗಳ ಗುಂಪು ಮುಸ್ಲಿಂ ಕುಟುಂಬದ ಕೈಯಲ್ಲಿದ್ದ ಮೊಬೈಲ್‌ ಫೋನ್‌ಗಳು, ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದೆ.

ಇಬ್ಬರು ಮಹಿಳೆಯರ ಮೈಸವರಿ ದ್ದಲ್ಲದೆ ಬಟ್ಟೆಗಳನ್ನು ಹರಿದು ಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಪಿನಲ್ಲಿ ಸುಮಾರು 30 ಜನರಿದ್ದರು. ಅವರು ರೈಲಿನ ಕಿಟಕಿ ಗಾಜನ್ನು ಒಡೆದು ಒಳನುಗ್ಗಿದರು ಎಂದು ಕುಟುಂಬದ ಯಜಮಾನ ಮೊಹಮ್ಮದ್‌ ಶಾಕಿರ್‌ ಹೇಳಿದ್ದಾರೆ.

ಮಹಿಳೆಯರು ಬುರ್ಖಾ ಧರಿಸಿದ್ದ ರಿಂದ ತಮ್ಮ ಧರ್ಮದ ಬಗ್ಗೆ ದುಷ್ಕರ್ಮಿ ಗಳು ಕೆಟ್ಟದಾಗಿ ಮಾತ ನಾಡಿದರು ಎಂದು ಶಾಕಿರ್‌ ಹೇಳಿದ್ದಾರೆ.  ಆದರೆ ಅವರು ಮುಸ್ಲಿಮರು ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ ಎಂಬುದನ್ನು ಪೊಲೀ ಸರು ಅಲ್ಲಗಳೆದಿದ್ದಾರೆ.  ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು ಇತರರಿಗಾಗಿ ಶೋಧ ನಡೆದಿದೆ.

ಪ್ರತಿಕ್ರಿಯಿಸಿ (+)