ಶುಕ್ರವಾರ, ಡಿಸೆಂಬರ್ 6, 2019
17 °C
ದೂರದರ್ಶನಕ್ಕೆ ಬಿಬಿಸಿಯಂತೆ ಬೆಳೆಯುವ ಗುರಿ

ಫ್ರೀಡಿಶ್‌ನಿಂದ 120 ಉಚಿತ ವಾಹಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ರೀಡಿಶ್‌ನಿಂದ 120 ಉಚಿತ ವಾಹಿನಿ

ನವದೆಹಲಿ: ಚಂದಾದಾರರಿಗೆ ಉಚಿತವಾಗಿ 120 ವಾಹಿನಿಗಳನ್ನು ನೀಡುವ ದೂರದರ್ಶನದ ‘ಫ್ರೀಡಿಶ್‌’ ವ್ಯವಸ್ಥೆ ಶೀಘ್ರ ಆರಂಭವಾಗಲಿದೆ. ಆಕಾಶವಾಣಿಯ ಹಿಂದಿ ಮತ್ತು ಇಂಗ್ಲಿಷ್‌ ಹಾಗೂ ದೂರದರ್ಶನದ ವಾಹಿನಿಗಳನ್ನು ಒಟ್ಟು ಸೇರಿಸಿ ಬಿಬಿಸಿ ರೀತಿಯ ಜಾಗತಿಕ  ಪ್ರಸಾರ ಸಂಸ್ಥೆಯನ್ನು ರೂಪಿಸುವ ಕೆಲಸವನ್ನು ಪ್ರಸಾರ ಭಾರತಿ ಆರಂಭಿಸಿದೆ.

ಸರ್ಕಾರಿ ಸ್ವಾಮ್ಯದ ‘ಡೈರೆಕ್ಟ್‌ ಟು ಹೋಮ್‌’ (ಡಿಟಿಎಚ್‌) ಮೂಲಕ ಈಗ 80 ವಾಹಿನಿಗಳು ದೊರೆಯುತ್ತಿವೆ. ಈ ಸಂಖ್ಯೆಯನ್ನು ಹೆಚ್ಚಿಸಲು ಪ್ರಸಾರ ಭಾರತಿ ಸಿದ್ಧತೆ ನಡೆಸುತ್ತಿದೆ.

ಡಿ.ಡಿ ಫ್ರೀಡಿಶ್‌ ಸಂಕೇತಗಳನ್ನು ಪಡೆಯಬಲ್ಲ, ಹೆಚ್ಚು ಸಂಖ್ಯೆಯ ವಾಹಿನಿಗಳು ಲಭ್ಯವಾಗುವ ಸೆಟ್‌ ಟಾಪ್‌ ಬಾಕ್ಸ್‌ಗಳು ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

ಈಗ ಇರುವ ವಾಹಿನಿಗಳ ಸಂಖ್ಯೆಗೆ ಮತ್ತೆ 40 ವಾಹಿನಿಗಳನ್ನು ಸೇರಿಸುವುದು ಈಗಿನ ಗುರಿ. ಅದು ಪೂರ್ಣಗೊಂಡ ಬಳಿಕ 250 ವಾಹಿನಿಗಳನ್ನು ನೀಡುವುದು ಮುಂದಿನ ಗುರಿ. ಇದಕ್ಕೆ ಹೆಚ್ಚುವರಿ ಟ್ರಾನ್ಸ್‌ಪಾಂಡರ್‌ಗಳ (ಸಂಕೇತಗಳನ್ನು ಬಿತ್ತರಿಸುವ ವ್ಯವಸ್ಥೆ) ಅಗತ್ಯ ಇದೆ.

‘ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ವಾಹಿನಿಗಳನ್ನು ಹೆಚ್ಚಿಸುವುದಕ್ಕೆ ಬೇಕಾದ ತಾಂತ್ರಿಕ ನೆರವಿಗೆ ಇಸ್ರೊ ಸಹಾಯ ಪಡೆದುಕೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಅರ್ನೆಸ್ಟ್‌ ಅಂಡ್‌ ಯಂಗ್‌ (ಎವೈ) ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ, ಡಿಟಿಎಚ್‌ ಸೇವೆಯು ದೇಶದ ಅತ್ಯಂತ ದೊಡ್ಡ ವಿತರಣಾ ಕೇಂದ್ರವಾಗಿ ಬೆಳೆಯುತ್ತಿದೆ.

ಚಂದಾದಾರರ ಪ್ರಮಾಣ ತೀವ್ರವಾಗಿ ಹೆಚ್ಚುತ್ತಿದೆ. ಹಾಗಾಗಿ ಇದು ಜಾಹೀರಾತುದಾರರ ಗಮನವನ್ನೂ ಸೆಳೆದಿದೆ ಎಂದು ಎವೈ ಹೇಳಿದೆ.

ಚಂದಾದಾರರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಡಿಟಿಎಚ್‌ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳ ಗುಣಮಟ್ಟ ಉತ್ತಮಪಡಿಸುವತ್ತ ಪ್ರಸಾರ ಭಾರತಿ ಈಗ ಹೆಚ್ಚಿನ ಗಮನ ಹರಿಸುತ್ತಿದೆ.

ಪ್ರತಿಕ್ರಿಯಿಸಿ (+)