ಮಂಗಳವಾರ, ಡಿಸೆಂಬರ್ 10, 2019
17 °C

‘ಅಮ್ಮಾ ಇ– ಗ್ರಾಮ’ ಸ್ಥಾಪನೆ ತಮಿಳುನಾಡು ಸಿ.ಎಂ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

‘ಅಮ್ಮಾ ಇ– ಗ್ರಾಮ’ ಸ್ಥಾಪನೆ ತಮಿಳುನಾಡು ಸಿ.ಎಂ ಘೋಷಣೆ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹೆಸರಿನಲ್ಲಿ ‘ಇ– ಗ್ರಾಮ’ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಶುಕ್ರವಾರ ಹೇಳಿದ್ದಾರೆ.

‘ಜಿಲ್ಲೆಯ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅದನ್ನು ‘ಅಮ್ಮಾ ಇ–ಗ್ರಾಮ’ವನ್ನಾಗಿ ಪರಿವರ್ತಿಸಲಾಗುವುದು. ವೈಫೈ ಹಾಟ್‌ಸ್ಪಾಟ್‌, ಅತ್ಯಾಧುನಿಕ ಬೀದಿದೀಪ ಸೌಲಭ್ಯ, ಉಪಗ್ರಹ ಆಧಾರಿತ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯವನ್ನು ಈ ಗ್ರಾಮಗಳಿಗೆ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)