ಶುಕ್ರವಾರ, ಡಿಸೆಂಬರ್ 13, 2019
17 °C

ಅಧಿಕಾರಿಗಳನ್ನು ಮನೆಗೆ ಕಳುಹಿಸಬೇಕು: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರಿಗಳನ್ನು ಮನೆಗೆ ಕಳುಹಿಸಬೇಕು: ಕುಮಾರಸ್ವಾಮಿ

ಬೆಂಗಳೂರು: ‘ಸೇವಾ ನಿಯಮ ಉಲ್ಲಂಘಿಸಿರುವ ಕಾರಾಗೃಹ ಅಧಿಕಾರಿಗಳನ್ನು ಸರ್ಕಾರ ರಜೆ ಮೇಲೆ ಮನೆಗೆ ಕಳುಹಿಸಬೇಕು’ ಎಂದು ಕುಮಾರಸ್ವಾಮಿ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಒತ್ತಾಯಿಸಿದರು.

‘ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕು. ಈ ಘಟನೆ ಮುಖ್ಯಮಂತ್ರಿ ಅಧೀನದಲ್ಲಿರುವ ಗೃಹ ಇಲಾಖೆಯ ದಿವಾಳಿತನ ತೋರಿಸುತ್ತದೆ’ ಎಂದು ಅವರು ಹೇಳಿದರು.

‘ಪ್ರಕರಣವನ್ನು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸರ್ಕಾರವೇ ರಚಿಸಿದ ಭ್ರಷ್ಟಚಾರ ನಿಗ್ರಹದ ದಳದಿಂದ ಈ ತನಿಖೆ ಸಾಧ್ಯ ಇಲ್ಲವೇ’ ಎಂದು ಪ್ರಶ್ನಿಸಿದ ಅವರು, ‘ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದಂತೆ ಇದನ್ನೂ ಮಾಡಬೇಡಿ. ಒಂದಂಕಿ ಲಾಟರಿ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳ ತನಿಖೆಯಂತೆ ಇದೂ ಹಳ್ಳ ಹಿಡಿಯಬಾರದು’ ಎಂದರು.

‘ಕಾರಾಗೃಹದ ಅಧಿಕಾರಿಗಳು ಜೈಲುಗಳಿಂದ ಸಂಗ್ರಹಿಸುತ್ತಿದ್ದ ₹ 75 ಲಕ್ಷ ಇದೀಗ ₹ 1 ಕೋಟಿಗೆ ಏರಿಕೆಯಾಗಿದೆ ಎಂಬ ಆರೋಪಗಳಿವೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಶಶಿಕಲಾಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲು ಲಂಚ ಪಡೆದಿರುವುದಲ್ಲದೆ, ತಿಂಗಳಿಗೆ 10 ಲಕ್ಷ ನಿಗದಿಯಾಗಿತ್ತು ಎಂಬ ಮಾತೂ ಕೇಳಿ ಬಂದಿವೆ. ಇಂಥ ಆರೋಪಗಳ ಬಗ್ಗೆಯೂ ತನಿಖೆ ಆಗಬೇಕು’ ಎಂದರು.

ಪ್ರತಿಕ್ರಿಯಿಸಿ (+)