ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನ ಕ್ಯಾನ್ಸರ್‌: ಬಿಆರ್‌ಸಿಎ ವಂಶವಾಹಿ ದೇಶದಲ್ಲಿ ಹೆಚ್ಚು

Last Updated 14 ಜುಲೈ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: ಸ್ತನ ಕ್ಯಾನ್ಸರ್‌ ಉಂಟು ಮಾಡುವ ಬಿಆರ್‌ಸಿಎ ವಂಶವಾಹಿ ರೂಪಾಂತರಗಳು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮೂರು ಪಟ್ಟು ಹೆಚ್ಚಾಗಿವೆ ಎಂಬ ಅಂಶವು ಸ್ಟ್ರ್ಯಾಂಡ್ ಲೈಫ್‌ ಸೈನ್ಸಸ್‌ ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಈ ಬಗ್ಗೆ ವಿವರಿಸಿದ ಸಂಸ್ಥೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಸುಧೀರ್ ಬೊರ್ಗೋನ್ಹಾ, ‘ಅನುವಂಶೀಯ ಸ್ತನ ಮತ್ತು ಅಂಡಾಶಯ ಕ್ಯಾನ್ಸರ್ (ಬಿಒಸಿ) ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.  ಈ ರೋಗಿಗಳ ಮೊದಲ ಹಂತದ ಸಂಬಂಧಿಗಳಲ್ಲಿ (ಪೋಷಕರು, ಮಕ್ಕಳು, ಸೋದರ ಸಂಬಂಧಿಗಳು) ಶೇ 72ರಷ್ಟು ಮಂದಿಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಇದೇ ರೂಪಾಂತರ ಇರುವುದು ಕಂಡುಬಂದಿತ್ತು’ ಎಂದು ಹೇಳಿದರು.
‘20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ತನದ ಕ್ಯಾನ್ಸರ್‌ ರೋಗಿಗಳನ್ನು ಪರೀಕ್ಷೆ ಮಾಡಿದ್ದೇವೆ. ಅವರಿಗೆ ಜೆನಾಮಿಕ್‌ ಪ್ರೊಫೈಲಿಂಗ್‌ ನಡೆಸಿದರೆ ಅವರ ಕ್ಯಾನ್ಸರ್‌ ಅನುವಂಶೀಯವೇ ಎಂಬುದನ್ನು ತಿಳಿದುಕೊಳ್ಳಬಹುದು. ಜತೆಗೆ ಅವರ ಕುಟುಂಬದ ಸದಸ್ಯರು ತಪಾಸಣೆ ನಡೆಸಿಕೊಳ್ಳುವಂತೆ ಸಲಹೆ ನೀಡಬಹುದು’ ಎಂದರು.

‘ಕ್ಯಾನ್ಸರ್ ಇರುವ ರೋಗಿಯ ಸಂಬಂಧಿಗಳು ತಪಾಸಣೆ ಮಾಡಿಸಿಕೊಳ್ಳಬೇಕು. ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷ ಡಾ. ವಿಜಯ್ ಚಂದ್ರು, ‘ದೇಶದಲ್ಲಿ ಅನುವಂಶೀಯ ರೂಪಾಂತರಗಳನ್ನು ನಿರೂಪಿಸುವ ಕುರಿತು ಸ್ತನ, ಅಂಡಾಶಯ ಕ್ಯಾನ್ಸರ್‌ ರೋಗಿಗಳ ಮೇಲೆ ನಡೆದಿರುವ ಅಧ್ಯಯನಗಳು ಕಡಿಮೆ. ಈ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಕ್ಯಾನ್ಸರ್ ವಂಶವಾಹಿಗಳು, ಬಿಆರ್‌ಸಿಎ 1, 2ಗಳ ಅಧ್ಯಯನವನ್ನು ದೇಶದ ಬೇರೆ ಬೇರೆ ಪ್ರದೇಶಗಳ ರೋಗಿಗಳ ಮೇಲೆ ನಡೆಸುವ ಅಗತ್ಯವಿದೆ’ ಎಂದು ಹೇಳಿದರು.
ಈ ಅಧ್ಯಯನ ವರದಿ ನೇಚರ್ ಗ್ರೂಪ್‌ನ ‘ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್‌’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT