ಶುಕ್ರವಾರ, ಡಿಸೆಂಬರ್ 6, 2019
17 °C

18ರ ನಂತರ ನೈರುತ್ಯ ಮುಂಗಾರು ಪ್ರಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

18ರ ನಂತರ ನೈರುತ್ಯ ಮುಂಗಾರು ಪ್ರಬಲ

ಬೆಂಗಳೂರು:  ‘ನೈರುತ್ಯ ಮುಂಗಾರು 18ರ ನಂತರ ಪ್ರಬಲವಾಗಲಿದೆ. ಇದರಿಂದ ರಾಜ್ಯದ ಎಲ್ಲೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದರು.

‘ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಗಳಲ್ಲಿ ವಾಯುಭಾರ ಕುಸಿತ ಆಗುವ ಸೂಚನೆ ಇದೆ. ಇದರಿಂದ ದಕ್ಷಿಣ ಒಳನಾಡು ಭಾಗಗಳಾದ ಕೊಡಗು, ಮೈಸೂರು, ಚಾಮರಾಜನಗರಗಳಲ್ಲಿ ಉತ್ತಮ ಮಳೆಯಾಗಲಿದೆ’ ಎಂದರು. ‘ಸದ್ಯ ಕರಾವಳಿ ಭಾಗದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಇನ್ನೂ 4ದಿನ ರಾಜ್ಯದಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗಲಿದೆ’ ಎಂದರು.

ಪ್ರತಿಕ್ರಿಯಿಸಿ (+)