ಸೋಮವಾರ, ಡಿಸೆಂಬರ್ 16, 2019
18 °C

ಶರತ್ ಸಾವಿನ ಘೋಷಣೆ: ಪೊಲೀಸ್‌ ಪಾತ್ರವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶರತ್ ಸಾವಿನ ಘೋಷಣೆ: ಪೊಲೀಸ್‌ ಪಾತ್ರವಿಲ್ಲ

ಮಂಗಳೂರು: ಶರತ್‌ ಸಾವಿನ ಘೋಷಣೆಯನ್ನು ವೈದ್ಯರೇ ಮಾಡಬೇಕಾಗುತ್ತದೆ. ಇದರಲ್ಲಿ ಪೊಲೀಸರ ಯಾವುದೇ ಪಾತ್ರವಿಲ್ಲ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ರೂಪಕ್‌ಕುಮಾರ್‌ ದತ್ತ ಸ್ಪಷ್ಟಪಡಿಸಿದರು. ನಗರದ ಪೊಲೀಸ್‌ ಆಯುಕ್ತರ ಕಚೇ ರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವ್ಯಕ್ತಿ ಮೃತ ಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸ ಬೇಕು. ಈ ವಿಷಯದಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಿಲ್ಲ ಎಂದರು.

ಎಲ್ಲ ಪ್ರಕರಣಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವುದು ಸರಿಯಲ್ಲ. ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸಲಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ವಿಳಂಬವಾಗುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು, ನಿರಪರಾಧಿಗಳನ್ನು ಬಂಧಿಸಬಾರದು. ಹೀಗಾಗಿ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ. ಶರತ್‌ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರಿಂದ ಯಾವುದೇ ಲೋಪ ಆಗಿಲ್ಲ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಏಪ್ರಿಲ್‌ 20 ರಂದು ಕರೋಪಾಡಿ ಯಲ್ಲಿ ನಡೆದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಲೀಲ್‌ ಕೊಲೆ ಪ್ರಕರಣ ದಲ್ಲಿ 11 ಜನರನ್ನು ಬಂಧಿಸಲಾಗಿದೆ. ಜೂನ್‌ 13 ರಂದು ನಡೆದ ರತ್ನಾಕರ್‌ ಶೆಟ್ಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ 13 ಜನರನ್ನು ಬಂಧಿಸಲಾಗಿದೆ. ಜೂನ್‌ 20 ರಂದು ನಡೆದ ಅಶ್ರಫ್‌ ಕಲಾಯಿ ಕೊಲೆ ಪ್ರಕರಣದಲ್ಲಿ 9 ಜನರನ್ನು ಬಂಧಿಸಲಾಗಿದೆ.

ಜೂನ್‌ 21 ರಂದು ನಡೆದ ಜುನೈದ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಇದೇ ಆರೋಪಿಗಳು ಶಾಮೀಲಾಗಿರುವುದು ಸ್ಪಷ್ಟವಾಗಿದೆ. ಇದೇ 7ರಂದು ಅಡ್ಯಾರ್‌ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಇದೇ 8 ರಂದು ಚಿರಂಜೀವಿ ಮೇಲೆ ನಡೆದ ಹಲ್ಲೆ ಪ್ರಕರಣ ಹಾಗೂ ಶರತ್‌ ಕೊಲೆ ಪ್ರಕರ ಣಗಳಲ್ಲಿ ಮಾತ್ರ ಇನ್ನೂ ಬಂಧನವಾಗಿಲ್ಲ ಎಂದು ವಿವರಿಸಿದರು.‘ಮಂಗಳೂರು, ಬಂಟ್ವಾಳ, ವಿಟ್ಲ, ಉಳ್ಳಾಲಗಳಿಗೆ ಖುದ್ದು ಭೇಟಿ ನೀಡಿದ್ದು, ಎಲ್ಲ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಬೆಂಗಳೂರಿನಲ್ಲಿ ಕುಳಿತು ಪರಿಶೀಲನೆ ಮಾಡುವುದಕ್ಕಿಂತ, ಸ್ಥಳಕ್ಕೆ ಬಂದು ನೋಡುವುದು ಭಿನ್ನವಾಗಿರು ತ್ತದೆ. ಇಲ್ಲಿನ ಪರಿಸ್ಥಿತಿಯನ್ನು ಅವಲೋ ಕಿಸಿದ್ದು, ಜಿಲ್ಲೆಯಲ್ಲಿ ಸದ್ಯಕ್ಕೆ ಸ್ಥಿತಿ ಸಾಮಾ ನ್ಯವಾಗಿದೆ. ಆದರೂ ಪೊಲೀಸರು ಅಗತ್ಯ ಮುಂಜಾಗ್ರತೆ ವಹಿಸಿದ್ದಾರೆ’ ಎಂದು ತಿಳಿಸಿದರು.

ಕ್ರಮ ನಿಶ್ಚಿತ: ಜಿಲ್ಲೆಯಲ್ಲಿ ನಡೆದಿರುವ ಗಲಭೆಗಳಲ್ಲಿ ಭಾಗಿಯಾದವರ ಮೇಲೆ ಕ್ರಮ ನಿಶ್ಚಿತ. ಅಪರಾಧಿಗಳನ್ನು ರಕ್ಷಿಸುವುದಿಲ್ಲ. ಹಾಗಂತ ನಿರಪರಾಧಿಗಳನ್ನು ಬಂಧಿಸುವುದಿಲ್ಲ ಎಂದು ಹೇಳಿದರು. ಶರತ್‌ ಶವಯಾತ್ರೆ ಸಂದರ್ಭ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗುಂಪಿನಲ್ಲಿ ಗಲಭೆ ಸಂಭವಿಸಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

ಮೆರವಣಿಗೆ ಸಂದರ್ಭದಲ್ಲಿ ವಿಡಿಯೊ ಚಿತ್ರಿಕರಣ ಮಾಡಲಾಗಿದ್ದು, ದೃಶ್ಯಾವಳಿಗಳನ್ನು ಪರಿಶೀಲಿಸಿ, ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಎಡಿಜಿಪಿ ಅಲೋಕ್‌ ಮೋಹನ್‌, ಪಶ್ಚಿಮ ವಲಯ ಐಜಿಪಿ ಪಿ. ಹರಿ ಶೇಖರನ್‌, ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಇದ್ದರು.

‘ಜಿಲ್ಲೆಯ ಜನ  ಶಾಂತಿಪ್ರಿಯರು’

‘ದಕ್ಷಿಣ ಕನ್ನಡ ಜಿಲ್ಲೆಯ ಜನರು ಶಾಂತಿ ಪ್ರಿಯರು. ಇಲ್ಲಿನ ವಿವಿಧ ಸಂಘಟನೆಗಳ ಜತೆಗೆ ಚರ್ಚಿಸಿದ್ದೇನೆ. ಹಲವರು ನನ್ನನ್ನು ಭೇಟಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದ ನೆಲೆಸಬೇಕು ಎಂಬುದೇ ಎಲ್ಲರ ಬಯಕೆಯಾಗಿದೆ’ ಎಂದು ರೂಪಕ್‌ಕುಮಾರ್‌ ದತ್ತ ತಿಳಿಸಿದರು.

ಕರಾವಳಿ ಜಿಲ್ಲೆ ಕೋಮುಗಲಭೆಯ ಪ್ರಯೋಗಶಾಲೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಸರಿಯಲ್ಲ. ಶೇ 99 ಕ್ಕಿಂತ ಹೆಚ್ಚು ಜನರು ಶಾಂತಿ ಬಯಸುತ್ತಾರೆ. ಕೆಲವೇ ಕೆಲವು ಜನರು ಮಾಡುವ ಕೃತ್ಯಗಳಿಂದ ಈ ರೀತಿ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)