ಶುಕ್ರವಾರ, ಡಿಸೆಂಬರ್ 13, 2019
20 °C

ದೇವಾಲಯಗಳಿಂದ ಸಮುದಾಯಗಳಲ್ಲಿ ಒಗ್ಗಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಾಲಯಗಳಿಂದ ಸಮುದಾಯಗಳಲ್ಲಿ ಒಗ್ಗಟ್ಟು

ವಿರಾಜಪೇಟೆ: ಕಾಯಕದಲ್ಲಿ ನಿಷ್ಠೆ ಹಾಗೂ ಪರಿಶುದ್ಧ ಮನಸ್ಸಿನಿಂದ ಮಾಡುವ ಪ್ರಾರ್ಥನೆಯಿಂದ ಶಾಂತಿ, ನೆಮ್ಮದಿ ದೊರಕಲೂ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ ಹೇಳಿದರು. ಸಮೀಪದ ಹೊಸಕೋಟೆ ಗ್ರಾಮದಲ್ಲಿ  ನಿರ್ಮಿಸಲು ಉದ್ದೇಶಿಸಿ ರುವ ಚಾಮುಂಡೇಶ್ವರಿ ದೇವಾಲಯದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ತಾಲ್ಲೂಕು ಪಂಚಾಯಿತಿಯಿಂದ ಲಭ್ಯವಿ ರುವ ಅನುದಾನದಲ್ಲಿ ಕಾಮಗಾರಿಗೆ ಸಹಕಾರ ನೀಡಲಾಗುವುದು ಎಂದರು. ವಿರಾಜಪೇಟೆ ಪಟ್ಟಣ ಪಂಚಾಯಿತಿ  ಅಧ್ಯಕ್ಷ ಇ.ಸಿ.ಜೀವನ್ ಮಾತನಾಡಿ,  ದೇವಾಲಯಗಳ ನಿರ್ಮಾಣದಿಂದ ಎಲ್ಲ ಸಮುದಾಯಗಳ ನಡುವೆ ಒಗ್ಗಟ್ಟು ಮೂಡಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಮನೋಹರ್ ಮಾತನಾಡಿ, ದೇವಾಲಯ ನಿರ್ಮಾಣ ಕಾಮಗಾರಿಗೆ ಅಂದಾಜು ₹13 ಲಕ್ಷ ಅಗತ್ಯವಿದ್ದು, ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಬಿಳುಗುಂದ ಪಿಡಿಒ ಪ್ರಮೋದ್, ಬಿಜೆಪಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ್, ಎಸ್ಎನ್‌ಡಿಪಿಯ ವಿರಾಜಪೇಟೆ ಶಾಖೆ ಅಧ್ಯಕ್ಷ ಪಿ. ನಾರಾಯಣ, ಓಣಂ ಆಚರಣಾ ಸಮಿತಿಯ ಪಿ.ಆರ್. ಬಾಬು ಮುಂತಾದವರು ಉಪಸ್ಥಿತರಿದ್ದರು. 

ತಂತ್ರಿಗಳಾದ ರಾಜೇಂದ್ರ ಸರಸ್ವತಿ ಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾ ಯಿತು. ಆಟೊ ಚಾಲಕರ ಸಂಘದ ಅಧಕ್ಷ ಎಂ.ಎಂ.ಶಶಿಧರನ್ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)