ಸೋಮವಾರ, ಡಿಸೆಂಬರ್ 9, 2019
26 °C

ವಿರುಪಾಪುರ: ಬಸ್‌ ವ್ಯವಸ್ಥೆ ಕಲ್ಪಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರುಪಾಪುರ: ಬಸ್‌ ವ್ಯವಸ್ಥೆ ಕಲ್ಪಿಸಲು ಮನವಿ

ತಾವರಗೇರಾ: ಸಮೀಪದ ವಿರುಪಾಪುರ ಗ್ರಾಮದದಿಂದ ಲಿಂಗದಹಳ್ಳಿ ಪ್ರೌಢಶಾಲೆಗೆ ಹೋಗುವ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕಾಲ್ನಡಿಗೆಯೇ ಗತಿ.  ಈ ಮಾರ್ಗದಲ್ಲಿ ಸಂಚರಿಸುವ  ಸಾರಿಗೆ ಬಸ್‌ಗಳು ವಿದ್ಯಾರ್ಥಿಗಳು ಶಾಲೆಗೆ ಹೋಗುವ ಸಮಯಕ್ಕೆ ಇಲ್ಲ. ಇದರಿಂದ ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಹೋಗಬೇಕಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ತಂದಿದೆ. ಆದರೆ, ಈ ಭಾಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸರಿಯಾದ ವ್ಯವಸ್ಥೆ ಇಲ್ಲ.

ಗ್ರಾಮದಿಂದ ಲಿಂಗದಹಳ್ಳಿ ಪ್ರೌಢಶಾಲೆಗೆ ಪ್ರತಿದಿನ 15 ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೋಗುತ್ತಾರೆ. ಪ್ರತಿದಿನ ನಡೆದು ಕೊಂಡು  ಹೋಗಬೇಕಾಗಿರುವುದರಿಂದ ಕೆಲ ವಿದ್ಯಾರ್ಥಿಗಳು ಶಾಲೆ ಬಿಟ್ಟ ಉದಾಹರಣೆಗಳಿವೆ ಎನ್ನುತ್ತಾರೆ ವಿದ್ಯಾರ್ಥಿನಿ ಮೋನಿಕಾ ಹರಿಜನ ‘ಗ್ರಾಮದಲ್ಲಿ ಶಾಲೆ  4 ಕಿ.ಮೀ ಇದೆ. ಹೆಣ್ಣುಮಕ್ಕಳಿಗೆ ಅಷ್ಟುದೂರ ನಡೆದುಕೊಂಡು ಹೋಗಲು ಕಷ್ಟವಾಗುತ್ತದೆ. ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳು ಗಮನಹರಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ವಿದ್ಯಾರ್ಥಿನಿ ಸಂಗೀತಾ , ಭಾಗ್ಯಮ್ಮ ದಾಯಿಪಲ್ಯೆ , ಭವಾನಿ ಗಾಣದಾಳ, ಜಯಶ್ರೀ ಒತ್ತಾಯಿಸಿದರು.

* * 

ದಿನಾಲೂ  ಶಾಲೆಗೆ 4 ಕಿ.ಮೀ ನಡೆದುಕೊಂಡೇ ಹೋಗಬೇಕು. ಶಾಲಾ ಸಮಯಕ್ಕೆ ಬಸ್ ಸೌಕರ್ಯ ಇದ್ದರೆ ಅನುಕೂಲವಾಗುತ್ತದೆ

ಮೈತ್ರಿ ಲೋಕರೆ

ವಿದ್ಯಾರ್ಥಿನಿ

ಪ್ರತಿಕ್ರಿಯಿಸಿ (+)