ಬುಧವಾರ, ಡಿಸೆಂಬರ್ 11, 2019
25 °C

‘ಮಲ್ಯ ಹಾಜರುಪಡಿಸಿದರಷ್ಟೇ ಶಿಕ್ಷೆ ಪ್ರಕಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಲ್ಯ ಹಾಜರುಪಡಿಸಿದರಷ್ಟೇ ಶಿಕ್ಷೆ ಪ್ರಕಟ’

ನವದೆಹಲಿ: ‘ಮಕ್ಕಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಬಾರದು’ ಎಂದು ಕರ್ನಾಟಕ ಹೈಕೋರ್ಟ್‌ನ ಆದೇಶ ಇದ್ದರೂ, ಅದನ್ನು ಉಲ್ಲಂಘಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ, ‘ಮಲ್ಯ ಅವರನ್ನು ಹಾಜರುಪಡಿಸುವವರೆಗೂ, ಶಿಕ್ಷೆ ಪ್ರಕಟಿಸುವುದಿಲ್ಲ’ ಎಂದು  ಅದು ಹೇಳಿದೆ.

ಇದಕ್ಕೂ ಮುನ್ನ ಅಟಾರ್ನಿ ಜನರಲ್  ಕೆ.ಕೆ.ವೇಣುಗೋಪಾಲ್ ಅವರು, ‘ಬ್ರಿಟನ್‌ನಿಂದ  ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆ ಡಿಸೆಂಬರ್ ವೇಳೆಗೆ  ಪೂರ್ಣಗೊಳ್ಳಬಹುದು’ ಎಂದು ತಿಳಿಸಿದರು.  ಈ ಹಿಂದಿನ ವಿಚಾರಣೆ ವೇಳೆ ಪೀಠವು, ‘ಜುಲೈ 14ರಂದು ಶಿಕ್ಷೆ ಪ್ರಕಟಿಸಲಾಗುವುದು’ ಎಂದು ಹೇಳಿತ್ತು.

ಪ್ರತಿಕ್ರಿಯಿಸಿ (+)