ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ನೆರವು: ಪಾಕಿಸ್ತಾನಕ್ಕೆ ಕಠಿಣ ಷರತ್ತು ವಿಧಿಸಿದ ಅಮೆರಿಕ

Last Updated 15 ಜುಲೈ 2017, 9:42 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧ ಗಮನಾರ್ಹ ಕ್ರಮ ಕೈಗೊಂಡರೆ ಮಾತ್ರ ಪಾಕಿಸ್ತಾನಕ್ಕೆ ರಕ್ಷಣಾ ಕ್ಷೇತ್ರದಲ್ಲಿ ಆರ್ಥಿಕ ನೆರವು ನೀಡುವ ಷರತ್ತು ವಿಧಿಸಿರುವ ಮೂರು ಸಾಂವಿಧಾನಕ ತಿದ್ದುಪಡಿಗಳನ್ನೊಳಗೊಂಡ ಮಸೂದೆಯನ್ನು ಅಮೆರಿಕದ ಸಂಸತ್ತು ಅಂಗೀಕರಿಸಿದೆ.

ಪಾಕಿಸ್ತಾನವು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂಬುದಾಗಿ ಅಮೆರಿಕದ ಹಲವು ಸಂಸದರು ಆತಂಕ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ₹ 41.8 ಲಕ್ಷ ಕೋಟಿ (651 ಶತಕೋಟಿ ಡಾಲರ್‌) ಮೊತ್ತದ ಅನುದಾನಕ್ಕೆ ಸಂಬಂಧಿಸಿದ  ‘ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆಯನ್ನು(ಎನ್‌ಡಿಎಎ)’ ಅಮೆರಿಕ ಸಂಸತ್ತಿನ ಕೆಳಮನೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.

2017ರ ಅಕ್ಟೋಬರ್‌ ಒಂದರಿಂದ ಆರಂಭವಾಗಲಿರುವ ಹಣಕಾಸು ವರ್ಷದ ರಕ್ಷಣಾ ವೆಚ್ಚಗಳಿಗೆ ‘ಎನ್‌ಡಿಎಎ–2018’ ಅನ್ವಯವಾಗಲಿದೆ.

ಪಾಕಿಸ್ತಾನಕ್ಕೆ ವಿಧಿಸಲಾಗಿರುವ ಪ್ರಮುಖ ಷರತ್ತುಗಳು:
* ಭಯೋತ್ಪಾದನೆ ನಿಗ್ರಹಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು
* ಗಡಿಯಾಚೆಗಿನ ಉಗ್ರರ ದಾಳಿಯನ್ನು ಹತ್ತಿಕ್ಕಬೇಕು
* ಅತ್ಯಾಧುನಿಕ ಸ್ಫೋಟಕಗಳನ್ನು ಬಳಸಿ ಉಗ್ರರು ದಾಳಿ ನಡೆಸುವುದಕ್ಕೆ ತಡೆಯೊಡ್ಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT