ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕ್‌ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ನಾಲ್ವರು ಪೌರಕಾರ್ಮಿಕರು ಸಾವು

Last Updated 15 ಜುಲೈ 2017, 11:48 IST
ಅಕ್ಷರ ಗಾತ್ರ

ನವದೆಹಲಿ: ಗಿಟೋರ್ನಿ ಬಳಿಯ ಕೊಳಚೆ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ನಾಲ್ಕು ಮಂದಿ ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. 

ಮೃತರು ಸ್ವರ್ಣ ಸಿಂಗ್ (45), ದೀಪು(28), ಅನಿಲ್(23),  ಬಲ್ವಿಂದರ್(32) ಎಂದು ಗುರುತಿಸಲಾಗಿದೆ. ಮೃತ ನಾಲ್ವರು ಛತ್ತರ್‌ಪುರದ ಅಂಬೇಡ್ಕರ್ ಕಾಲೋನಿಯವರೆಂದು ತಿಳಿದು ಬಂದಿದೆ. 

 ಪೌರ ಕಾರ್ಮಿಕರು ಮನೆಯ ಕೊಳಭರಿತ ಟ್ಯಾಂಕ್‌ ಸ್ಚಚ್ಛಗೊಳಿಸಲು ಟ್ಯಾಂಕ್ ಒಳಗೆ ಇಳಿದಿದ್ದಾರೆ. ಆದರೆ ಸುಮಾರು ಗಂಟೆಗಳಾದರೂ ಅವರು ಹೊರಗೆ ಬರಲಿಲ್ಲ.  ನಂತರ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ  ಕೈಗೊಂಡು ಕಾರ್ಯಾಚರಣೆ ಬಳಿಕ ಟ್ಯಾಂಕ್‌ನಲ್ಲಿ ಅಪ್ರಜ್ಞಾವಸ್ಥೆಯಲ್ಲಿದ್ದ ಪೌರಕಾರ್ಮಿಕರನ್ನು ಹೊರಗೆ ತಂದಿದ್ದಾರೆ. 

ಟ್ಯಾಂಕ್‌ನಲ್ಲಿ ಶೇಖರವಾಗಿದ್ದ ವಿಷಾನಿಲ ಈ ಅನಾಹುತಕ್ಕೆ ಕಾರಣವಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.  ಮೂವರನ್ನು ಹತ್ತಿರದ ಫೋರ್ಟಿಸ್,  ಇನ್ನಿಬ್ಬರನ್ನು ಏಮ್ಸ್, ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಹಲವಾರು ಪೌರ ಕಾರ್ಮಿಕರು ಟ್ಯಾಂಕಿನ ಅಡಿ ಸಿಲುಕಿರುವ ಸಾಧ್ಯತೆ ಇದ್ದು, ಉಳಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

ಮಳೆಕೊಯ್ಲಿನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿರುವುದೇ ಈ ಅನಾಹುತಕ್ಕೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಇಡೀ ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು 250 ಪೌರ ಕಾರ್ಮಿಕರಿದ್ದು, ನಗರದ ಒಳಚರಂಡಿ ಶುಚೀಕರಣ ಕಾರ್ಯದಲ್ಲಿ ತೊಡಗುತ್ತಾರೆ.

***

Four sanitation workers died of asphyxiation while cleaning a septic tank in south Delhi's Ghitorni area today, police said.

Five men had gone down to clean the tank in a household in the area but did not come out for long. They were later pulled out in an unconscious state by fire department personnel after an hour-long operation at around 10 in the morning.

It is suspected that they inhaled toxic gases inside the tank.

Three of them were taken to the Fortis Hospital, while the other two were taken to the AIIMS Trauma Centre and the Safdarjung Hospital.

Four workers, identified as Swarn Singh (45), Dipu (28), Anil (23) and Balwinder (32), were declared brought dead.

Jaspal, Swarn Singh's son, is currently undergoing treatment at Fortis.

All five are residents of Ambedkar Colony in Chhattarpur.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT