ಬುಧವಾರ, ಡಿಸೆಂಬರ್ 11, 2019
19 °C

ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಮನಸೋ ಇಚ್ಛೆ ಥಳಿತ: ವಿಡಿಯೊ ವೈರಲ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಮನಸೋ ಇಚ್ಛೆ ಥಳಿತ: ವಿಡಿಯೊ ವೈರಲ್‌

ಪಾಟಿಯಾಲ: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಕಾರಣಕ್ಕೆ ಮನೆಯವರೇ ಮನಸೋ ಇ‌ಚ್ಛೆ ಥಳಿಸಿರುವ ಘಟನೆ ಪಂಜಾಬ್‌ನ ಪಾಟಿಯಾಲ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಪಾಟಿಯಾಲ ನಿವಾಸಿಯಾಗಿರುವ ಮೀನಾ ಕಶ್ಯಪ್‌ ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದು, ವರ್ಷದ ಹಿಂದಷ್ಟೇ ದಲ್ಜಿತ್‌ ಸಿಂಗ್‌ ಅವರನ್ನು ವಿವಾಹವಾಗಿದ್ದರು.

ಇತ್ತೀಚಿಗೆ ಮೀನಾ ಕಶ್ಯಪ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗು ಜನಿಸಿದ್ದು ಗಂಡನ ಮನೆಯವರಿಗೆ ಇಷ್ಟವಿರಲಿಲ್ಲ. ಜತೆಗೆ, ಮೀನಾ ಅವರನ್ನು ಮನೆಗೆ ಸೇರಿಸದೆ ನಿರಾಕರಿಸಿದ್ದರು. ಬಳಿಕ ಗಂಡ ಹೆಂಡತಿ ಪ್ರತ್ಯೇಕ ಮನೆಯಲ್ಲಿ ವಾಸವಿದ್ದರು.

ಶನಿವಾರ ಮೀನಾ ಅವರ ಮನೆಗೆ ತೆರಳಿದ ದಲ್ಜೀತ್‌ ಸಿಂಗ್‌ ಸಹೋದರ ಹಾಗೂ ಆತನ ಸ್ನೇಹಿತರು ಹಾಕಿ ಬ್ಯಾಟ್‌ಗಳಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪಾಟಿಯಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೀನಾ ಕಶ್ಯಪ್‌ ಅವರ ತಂದೆ ಹೇಳಿಕೆ ನೀಡಿದ್ದು, ‘ದಲ್ಜಿತ್‌ ಸಿಂಗ್‌ ಹಾಗೂ ಅತನ ಸಹೋದರ ನಿತ್ಯ ವರದಕ್ಷಿಣೆ ಕಿರುಕುಳ ನೀಡುತಿದ್ದರು, ಏಳು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು’ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)