ಭಾನುವಾರ, ಡಿಸೆಂಬರ್ 15, 2019
18 °C

ಜಾಣ ಕುದುರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಣ ಕುದುರೆ

1590ರಲ್ಲಿ ಲಂಡನ್‌ನ ಜನರನ್ನು ಮೊರೊಕ್ಕೊ ಎಂಬ ನೃತ್ಯ ಮಾಡುವ ಕುದುರೆ ರಂಜಿಸುತ್ತಿತ್ತು. ಎರಡು ಹಾಗೂ ಮೂರೇ ಕಾಲುಗಳಲ್ಲಿ ಮೊರೊಕ್ಕೊ ನಡೆಯಬಲ್ಲವನಾಗಿದ್ದ. ಉಸಿರು ನಿಂತಂತೆ ನಟಿಸುವುದೂ ಗೊತ್ತಿತ್ತು. ವೀಕ್ಷಕರು ನಾಣ್ಯವನ್ನು ಎಸೆದಾಗ ತನ್ನ ಮಾಲೀಕನಿಗೆ ಕಾಲಿನ ಇಶಾರೆಯ ಮೂಲಕವೇ ತಿಳಿಸುತ್ತಿತ್ತು.

ಕಣ್ಕಟ್ಟು ಮಾಡಿದ್ದಕ್ಕಾಗಿ ಒಮ್ಮೆ ಆ ಕುದುರೆ ಹಾಗೂ ಅದರ ಮಾಲೀಕನಿಗೆ ಮರಣದಂಡನೆ ವಿಧಿಸಲಾಯಿತು. ಕ್ರಿಶ್ಚಿಯನ್ನರ ಪವಿತ್ರ ಸಂಕೇತವಾದ ಶಿಲುಬೆಯಾಕಾರದ ಎದುರು ಕುದುರೆ ಮಂಡಿಯೂರಿ ಕುಳಿತುಕೊಂಡಿತು. ಅದನ್ನು ಕಂಡು ಶಿಕ್ಷೆಯನ್ನು ರದ್ದುಪಡಿಸಿದರು.

ಪ್ರತಿಕ್ರಿಯಿಸಿ (+)