ಸೋಮವಾರ, ಡಿಸೆಂಬರ್ 16, 2019
17 °C

ಡಿಜಿಪಿಗೆ ಎರಡನೇ ವರದಿ ಸಲ್ಲಿಸಿದ ಡಿಐಜಿ ಡಿ. ರೂಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಜಿಪಿಗೆ ಎರಡನೇ ವರದಿ ಸಲ್ಲಿಸಿದ ಡಿಐಜಿ ಡಿ. ರೂಪಾ

ಬೆಂಗಳೂರು: ‘ಕಾರಾಗೃಹದಲ್ಲಿ ಬಂದಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ವ್ಯವಸ್ಥೆ ಮಾಡಲು ಕಾರಾಗೃಹಗಳ ಇಲಾಖೆ ಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್‌ ಅವರು ₹ 2 ಕೋಟಿ ಲಂಚ ಪಡೆದಿದ್ದಾರೆ ಎಂಬ ಮಾತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಪತ್ರ ಬರೆದಿದ್ದ ಇಲಾಖೆಯ ಡಿಐಜಿ ಡಿ. ರೂಪಾ ಅವರು ಈ ಸಂಬಂಧ ಎರಡನೇ ವರದಿಯನ್ನು ಡಿಜಿಪಿ ಅವರಿಗೆ ಶನಿವಾರ ಸಲ್ಲಿಸಿದ್ದಾರೆ.

ಜೈಲಿಗೆ ಡಿ. ರೂಪಾ ಹಾಗೂ ಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್‌ ಅವರು ಪ್ರತ್ಯೇಕವಾಗಿ ಭೇಟಿ ನೀಡಿದ್ದು, ಕೆಲವು ಮಾಹಿತಿ ಪಡೆದುಕೊಂಡಿದ್ದಾರೆ.

ರೂಪಾ ಅವರು ಸಲ್ಲಿಸಿರುವ ಎರಡನೇ ವರದಿಯಲ್ಲಿಯೂ ಶಶಿಕಲಾಗೆ ವಿಶೇಷ ಸೌಕರ್ಯ ಒದಗಿಸಿದ್ದಕ್ಕೆ ಲಂಚ ಪಡೆದಿರುವ ಕುರಿತು ಉಲ್ಲೇಖಿಸಿದ್ದಾರೆ.

ಎರಡನೇ ವರದಿಯ ಜತೆ ವಿಶೇಷ ಸೌಲಭ್ಯ ಕಲ್ಪಿಸಿರುವ ವಿಡಿಯೊಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇವನ್ನೂ ಓದಿ...

ಶಶಿಕಲಾಗೆ ವಿಶೇಷ ಆತಿಥ್ಯ: ರೂಪಾ– ಸತ್ಯನಾರಾಯಣರಾವ್‌ ನಡುವೆ ಜಟಾಪಟಿ

ಕಾರಾಗೃಹದಲ್ಲಿ ಭ್ರಷ್ಟಾಚಾರ ತನಿಖೆಗೆ ಸರ್ಕಾರದ ಆದೇಶ

* ವಿನಯಕುಮಾರ್ ತನಿಖಾಧಿಕಾರಿಯಾಗಿ ನೇಮಕ; ಭ್ರಷ್ಟಾಚಾರದ ತನಿಖೆ ಶುರು

ಪ್ರತಿಕ್ರಿಯಿಸಿ (+)