ಶನಿವಾರ, ಡಿಸೆಂಬರ್ 14, 2019
25 °C

ಮಿಥಾಲಿ ಶತಕ, ವೇದ ಕೃಷ್ಣಮೂರ್ತಿ ಅರ್ಧಶತಕ: ನ್ಯೂಜಿಲೆಂಡ್‌ಗೆ 266 ರನ್‌ ಟಾರ್ಗೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಥಾಲಿ ಶತಕ, ವೇದ ಕೃಷ್ಣಮೂರ್ತಿ ಅರ್ಧಶತಕ: ನ್ಯೂಜಿಲೆಂಡ್‌ಗೆ 266 ರನ್‌ ಟಾರ್ಗೆಟ್‌

ಡರ್ಬಿ: ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ ಮಹಿಳೆಯರ ತಂಡ ಶನಿವಾರ ಪ್ರಬಲ ನ್ಯೂಜಿಲೆಂಡ್ ಎದುರು ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಬೃಹತ್‌ ಮೊತ್ತ ಪೇರಿಸಿದೆ.

ಭಾರತದ ಸೆಮಿಫೈನಲ್‌ ಕನಸು ನನಸಾಗಬೇಕಾದರೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಸದ್ಯ ಭಾರತದ ವಿರುದ್ಧ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 265 ರನ್‌ ಗಳಿಸಿದೆ(ಸ್ಮೃತಿ ಮದಾನ 13, ಪೂನಮ್‌ ರಾಹುತ್‌ 04, ಹರ್ಮನ್‌ಪ್ರೀತ್‌ ಕೌರ್‌ 60, ಮಿಥಾಲಿ ರಾಜ್‌ 109, ದೀಪ್ತಿ ಶರ್ಮಾ 00,  ವೇದ ಕೃಷ್ಣಮೂರ್ತಿ 70, ಶಿಕ್ತಾ ಪಾಂಡೆ 00 ಸುಷ್ಮಾ ಶರ್ಮಾ ಬ್ಯಾಟಿಂಗ್‌ 00).

ಪ್ರತಿಕ್ರಿಯಿಸಿ (+)