ಶನಿವಾರ, ಡಿಸೆಂಬರ್ 14, 2019
21 °C

ಸ್ಪೇನ್‍ನ ಮುಗುರುಜಾ ಮುಡಿಗೆ ವಿಂಬಲ್ಡನ್ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪೇನ್‍ನ ಮುಗುರುಜಾ ಮುಡಿಗೆ ವಿಂಬಲ್ಡನ್ ಕಿರೀಟ

ಲಂಡನ್: ವಿಂಬಲ್ಡನ್ ಟೆನಿಸ್ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ವೀನಸ್‌ ವಿಲಿಯಮ್ಸ್‌ ಅವರನ್ನು ಪರಾಭವಗೊಳಿಸಿ  ಸ್ಪೇನ್‌ನ ಗಾರ್ಬೈನ್ ಮುಗುರುಜಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಶನಿವಾರ ಇಲ್ಲಿನ ಆಲ್‌ ಇಂಗ್ಲೆಂಡ್‌ ಕೋರ್ಟ್‌ನಲ್ಲಿ  ನಡೆದ ಪಂದ್ಯದಲ್ಲಿ  77 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ ಮುಗುರುಜಾ ಅವರು ವೀನಸ್ ಅವರನ್ನು 7-5, 6-0 ನೇರ ಸೆಟ್‍ಗಳಿಂದ ಮಣಿಸಿದ್ದಾರೆ.

ಪ್ರತಿಕ್ರಿಯಿಸಿ (+)