ಸೋಮವಾರ, ಡಿಸೆಂಬರ್ 16, 2019
25 °C

ಶೇ 73 ಜನಕ್ಕೆ ಮೋದಿ ಸರ್ಕಾರದ ಮೇಲೆ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೇ 73 ಜನಕ್ಕೆ ಮೋದಿ ಸರ್ಕಾರದ ಮೇಲೆ ವಿಶ್ವಾಸ

ನವದೆಹಲಿ: ‘ಕೇಂದ್ರ ಸರ್ಕಾರ ತಮಗೆ ಒಳಿತು ಮಾಡುತ್ತದೆ ಎಂದು ಶೇ73ರಷ್ಟು ಭಾರತೀಯರು  ನಂಬಿದ್ದಾರೆ. ಈ ಮೂಲಕ ಹೆಚ್ಚು ಜನಪ್ರಿಯತೆ ಹೊಂದಿರುವ ವಿವಿಧ ದೇಶಗಳ ಸರ್ಕಾರಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 3ನೇ ಸ್ಥಾನದಲ್ಲಿದೆ’ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ನಡೆಸಿದ ಸಮೀಕ್ಷೆ ಹೇಳಿದೆ.

ಆದರೆ, 2007ರ ಭಾರತ ಸರ್ಕಾರಕ್ಕೆ (ಶೇ82) ಹೋಲಿಸಿದರೆ ಈ ಸರ್ಕಾರದ ಜನಪ್ರಿಯತೆ ಕುಸಿದಿದೆ.

ಒಇಸಿಡಿ 35 ರಾಷ್ಟ್ರಗಳ ಸಂಘಟನೆಯಾಗಿದ್ದು, ಸದಸ್ಯ ರಾಷ್ಟ್ರಗಳ ಕೇಂದ್ರ ಸರ್ಕಾರಗಳ ಜನಪ್ರಿಯತೆ ಬಗ್ಗೆ ಸಮೀಕ್ಷೆ ನಡೆಸುತ್ತದೆ. ಸಂಸ್ಥೆ ಈ ಬಾರಿ ಆನ್‌ಲೈನ್‌ ಮತದಾನದ ಮೂಲಕ ಸಮೀಕ್ಷೆ ನಡೆಸಿತ್ತು. ಇಂಡೊನೇಷ್ಯಾ ಮತ್ತು ಸ್ವಿಟ್ಜರ್ಲೆಂಡ್ ಮೊದಲ ಎರಡು ಜನಪ್ರಿಯ ಮತ್ತು ವಿಶ್ವಾಸಾರ್ಹ ಸರ್ಕಾರಗಳೆನಿಸಿವೆ.

ಪ್ರತಿಕ್ರಿಯಿಸಿ (+)