ಮಂಗಳವಾರ, ಡಿಸೆಂಬರ್ 10, 2019
18 °C

ಅತ್ಯಾಚಾರ ಯತ್ನ :ವ್ಯಕ್ತಿಯ ತಲೆ ಬೋಳಿಸಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತ್ಯಾಚಾರ ಯತ್ನ :ವ್ಯಕ್ತಿಯ ತಲೆ ಬೋಳಿಸಿ ಮೆರವಣಿಗೆ

ಸಿಂದಗಿ (ವಿಜಯಪುರ): ತಾಲ್ಲೂಕಿನ ಹಿಟ್ಟಿನಹಳ್ಳಿ ತಾಂಡಾದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 50 ವರ್ಷದ ಶಂಕರಗಂಗೂ ರಾಠೋಡ ಎಂಬುವರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿದ ಮಹಿಳೆಯ ಸಂಬಂಧಿಕರು, ಬಳಿಕ ಅವರನ್ನು ಮೆರವಣಿಗೆ ಮಾಡಿದರು.

ತಾಂಡಾದ ತೋಟದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಬುಧವಾರ ಸಂಜೆ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವಿಷಯ ತಿಳಿದ ಮಹಿಳೆಯ ಸಂಬಂಧಿಕರು ಗುರುವಾರ ಸಂಜೆ ತಾಂಡಾದ ಸೇವಾಲಾಲ ವೃತ್ತದಲ್ಲಿ ಶಂಕರ ಅವರನ್ನು ತಡೆದು ಥಳಿಸಿದ್ದಾರೆ. ಹಲ್ಲೆಗೊಳಗಾದ ಶಂಕರ, ಮಹಿಳೆಯ ಸಂಬಂಧಿಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಷಯ ಗೊತ್ತಾದ ನಂತರ ಮಹಿಳೆಯ ಸಂಬಂಧಿಕರು ಮರು ದೂರು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)