ಮಂಗಳವಾರ, ಡಿಸೆಂಬರ್ 10, 2019
17 °C

‘ಆ್ಯಪ್‌ಗಳಿಂದ ಜಿಡಿಪಿಗೆ 2020ರಲ್ಲಿ ₹ 18 ಲಕ್ಷ ಕೋಟಿ ಕೊಡುಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆ್ಯಪ್‌ಗಳಿಂದ ಜಿಡಿಪಿಗೆ 2020ರಲ್ಲಿ ₹ 18 ಲಕ್ಷ ಕೋಟಿ ಕೊಡುಗೆ’

ನವದೆಹಲಿ: ‘ಕಳೆದ ಸಾಲಿನಲ್ಲಿ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಅಂತರ್ಜಾಲ ಆಧರಿತ ಆ್ಯಾಪ್‌ಗಳ ಕೊಡುಗೆಯ ಪ್ರಮಾಣದಲ್ಲಿ ಭಾರಿ ಏರಿಕೆ ಆಗಿದೆ.  ಮುಂದಿನ ದಿನಗಳಲ್ಲಿ ಈ ಕೊಡುಗೆಯ ಪ್ರಮಾಣ ಮತ್ತಷ್ಟು ಏರಿಕೆ ಆಗಲಿದೆ’ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.

ಭಾರತೀಯ ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಅಧ್ಯಯನ ಸಮಿತಿ ಮತ್ತು ಬ್ರಾಡ್‌ಬ್ಯಾಂಡ್ ಇಂಡಿಯಾ ಫೋರಂ ಪ್ರಕಟಿಸಿರುವ ‘ಭಾರತದಲ್ಲಿ ಅಂತರ್ಜಾಲ ಆಧರಿತ  ಆ್ಯಪ್‌ ಸೇವೆಗಳ ಮೌಲ್ಯ ಅಂದಾಜು ವರದಿ’ಯಲ್ಲಿ ಈ ಮಾಹಿತಿ ಇದೆ.

ಪ್ರತಿಕ್ರಿಯಿಸಿ (+)