ಭಾನುವಾರ, ಡಿಸೆಂಬರ್ 8, 2019
25 °C

ಫೈನಲ್‌ ಪ್ರವೇಶಿಸಿದ ಸಂಧು

Published:
Updated:
ಫೈನಲ್‌ ಪ್ರವೇಶಿಸಿದ ಸಂಧು

ಚೆನ್ನೈ: ಭಾರತದ ಹರಿಂದರ್‌ಪಾಲ್ ಸಂಧು ಅವರು ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ವಿಕ್ಟೋರಿಯನ್‌ ಓಪನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ನೆದರ್ಲೆಂಡ್ಸ್‌ನ ಪೆಡ್ರೊ ಶ್ವೀಟ್‌ಮನ್‌ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪಿದರು. ಎರಡನೇ ಶ್ರೇಯಾಂಕದ ಪೆಡ್ರೊ ಎದುರು ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದ ಮೂರನೇ ಶ್ರೇಯಾಂಕದ ಭಾರತದ ಆಟಗಾರ 11–5, 11–8, 11–8ರಿಂದ ಜಯ ಸಾಧಿಸಿದರು.

ಫೈನಲ್‌ನಲ್ಲಿ ಅವರು ಅಗ್ರ ಶ್ರೇಯಾಂಕದ ಆಟಗಾರ ಆಸ್ಟ್ರೇಲಿಯಾದ ರೆಕ್ಸ್ ಹೆಡ್ರಿಕ್‌ ಅವರನ್ನು ಎದುರಿಸುವರು.

ಪ್ರತಿಕ್ರಿಯಿಸಿ (+)