ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಬಾಬ್ವೆ ವಿರುದ್ಧದ ಪಂದ್ಯ: ಹಿನ್ನಡೆಯ ಭೀತಿಯಲ್ಲಿ ಲಂಕಾ

Last Updated 15 ಜುಲೈ 2017, 19:42 IST
ಅಕ್ಷರ ಗಾತ್ರ

ಕೊಲಂಬೊ: ಗ್ರೇಮ್‌ ಕ್ರೀಮರ್‌ (100ಕ್ಕೆ3) ಅವರ ದಾಳಿಗೆ ಬೆದರಿದ ಶ್ರೀಲಂಕಾ ತಂಡ ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಹಿನ್ನಡೆಯ ಭೀತಿ ಎದುರಿಸಿದೆ.

ಆರ್‌. ಪ್ರೇಮದಾಸ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 8 ವಿಕೆಟ್‌ಗೆ 344ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ಜಿಂಬಾಬ್ವೆ, ಮೊದಲ ಇನಿಂಗ್ಸ್‌ನಲ್ಲಿ 94.4 ಓವರ್‌ಗಳಲ್ಲಿ 356ರನ್‌ ಗಳಿಸಿತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್‌ ಆರಂಭಿಸಿರುವ ಸಿಂಹಳೀಯ ನಾಡಿನ ತಂಡ ದಿನದಾಟದ ಅಂತ್ಯಕ್ಕೆ 83 ಓವರ್‌ಗಳಲ್ಲಿ 7 ವಿಕೆಟ್‌ಗೆ 293ರನ್‌ ಗಳಿಸಿದೆ. ಈ ತಂಡ ಹಿನ್ನಡೆಯಿಂದ ಪಾರಾಗಲು ಇನ್ನು 63ರನ್‌ ಕಲೆ ಹಾಕಬೇಕಿದೆ.

ಇನಿಂಗ್ಸ್‌ ಆರಂಭಿಸಿದ ಲಂಕಾ ತಂಡಕ್ಕೆ ದಿಮುತ್‌ ಕರುಣಾರತ್ನೆ (25; 66ಎ, 1ಬೌಂ) ಮತ್ತು ಉಪುಲ್‌ ತರಂಗ (71; 107ಎ, 10ಬೌಂ, 1ಸಿ) ದಿಟ್ಟ ಆರಂಭ ಒದಗಿಸಿದರು. ಇವರು ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 84 ರನ್‌ ದಾಖಲಿಸಿದರು.

25ನೇ ಓವರ್‌ನಲ್ಲಿ ದಾಳಿಗಿಳಿದ ಡೊನಾಲ್ಡ್‌ ತಿರಿಪಾನೊ ಎರಡನೇ ಎಸೆತದಲ್ಲಿ ಕರುಣಾರತ್ನೆ ವಿಕೆಟ್‌ ಪಡೆದು  ಈ ಜೊತೆಯಾಟ ಮುರಿದರು. ಇದರ ಬೆನ್ನಲ್ಲೇ ಕುಶಾಲ್‌ ಮೆಂಡಿಸ್‌ (11; 15ಎ, 1ಬೌಂ) ಗ್ರೇಮ್‌ ಕ್ರೀಮರ್‌ಗೆ ವಿಕೆಟ್‌ ಒಪ್ಪಿಸಿದರು. ದಿನೇಶ್‌ ಚಾಂಡಿಮಲ್‌ (55; 100ಎ, 6ಬೌಂ) ಮತ್ತು ನಿರೋಷನ್‌ ಡಿಕ್ವೆಲ್ಲಾ (6; 13ಎ) ಅವರಿಗೂ ಪೆವಿಲಿಯನ್‌ ದಾರಿ ತೋರಿಸಿದ   ಕ್ರೀಮರ್‌, ಲಂಕಾ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು.

ಏಂಜೆಲೊ ಮ್ಯಾಥ್ಯೂಸ್‌ (41; 104, 2ಬೌಂ) ಮತ್ತು ದಿಲ್ರುವಾನ ಪೆರೆರಾ (33; 43ಎ, 2ಬೌಂ, 2ಸಿ) ದೊಡ್ಡ ಮೊತ್ತ ಗಳಿಸಲು ವಿಫಲರಾದರು.  ಸಂಕಷ್ಟದಲ್ಲಿದ್ದ ತಂಡಕ್ಕೆ ಅಸೆಲಾ ಗುಣರತ್ನೆ (ಬ್ಯಾಟಿಂಗ್‌ 24; 44ಎ, 2ಬೌಂ) ಆಸರೆಯಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್‌

ಜಿಂಬಾಬ್ವೆ: ಮೊದಲ ಇನಿಂಗ್ಸ್‌:  94.4 ಓವರ್‌ಗಳಲ್ಲಿ 356 (ಕ್ರೆಗ್‌ ಎರ್ವಿನ್‌ 160, ಡೊನಾಲ್ಡ್‌ ತಿರಿಪಾನೊ 27; ರಂಗನಾ ಹೆರಾತ್‌ 116ಕ್ಕೆ 5, ಲಾಹಿರು ಕುಮಾರ 68ಕ್ಕೆ2, ದಿಲ್ರುವಾನ ಪೆರೆರಾ 86ಕ್ಕೆ1, ಅಸೆಲಾ ಗುಣರತ್ನೆ 28ಕ್ಕೆ2).

ಶ್ರೀಲಂಕಾ: ಪ್ರಥಮ ಇನಿಂಗ್ಸ್‌: ದಿಮುತ್‌ ಕರುಣಾರತ್ನೆ 25, ಉಪುಲ್‌ ತರಂಗ 71, ಕುಶಾಲ್‌ ಮೆಂಡಿಸ್‌ 11, ದಿನೇಶ್‌ ಚಾಂಡಿಮಲ್‌ 55, ಏಂಜೆಲೊ ಮ್ಯಾಥ್ಯೂಸ್‌ 41, ದಿಲ್ರುವಾನ ಪೆರೆರಾ 33, ಅಸೆಲಾ ಗುಣರತ್ನೆ ಬ್ಯಾಟಿಂಗ್‌ 24).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT