ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಬಿಎಸ್‌ ಕನ್ನಡಿಗರ ಮೀಸಲಾತಿ ಸೀಟು ಸಂಖ್ಯೆ ಹೆಚ್ಚಳ

Last Updated 15 ಜುಲೈ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಕೋಟಾದಡಿ ಕರ್ನಾಟಕದ ವಿದ್ಯಾರ್ಥಿಗಳ ಮೀಸಲು ಸೀಟು ಪ್ರಮಾಣವನ್ನು ಶೇ30 ರಿಂದ ಶೇ 50ಕ್ಕೆ ಹೆಚ್ಚಿಸಲಾಗಿದೆ.

ಒಪ್ಪಂದದ ಪ್ರಕಾರ ಖಾಸಗಿ ಕಾಲೇಜುಗಳು ಶೇ 40ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿವೆ. ಶೇ 20ರಷ್ಟು ಸೀಟು ಅನಿವಾಸಿ ಭಾರತೀಯರಿಗೆ ಮೀಸಲಿಡಲಾಗಿದೆ. ಆಡಳಿತ ಮಂಡಳಿಯ ಶೇ 40ರಷ್ಟು ಸೀಟುಗಳ ಪೈಕಿ ಅರ್ಧದಷ್ಟು ಸೀಟುಗಳನ್ನು ಕರ್ನಾಟಕದವರಿಗೆ ಮಾತ್ರ ನೀಡಲಾಗುತ್ತದೆ.

‘ರಾಜ್ಯದ ವಿದ್ಯಾರ್ಥಿಗಳಿಂದ  ವೈದ್ಯಕೀಯ ಸೀಟುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ  ಇವರ ಮೀಸಲು ಸೀಟು ಪ್ರಮಾಣವನ್ನು ಹೆಚ್ಚಿಸಲಾಗಿದೆ.  ಈ ಸಂಬಂಧ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT