ಶುಕ್ರವಾರ, ಡಿಸೆಂಬರ್ 6, 2019
17 °C

50 ಕಿ.ಮೀಗೆ ಒಂದು ಪಾಸ್‌ಪೋರ್ಟ್ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

50 ಕಿ.ಮೀಗೆ ಒಂದು ಪಾಸ್‌ಪೋರ್ಟ್ ಕೇಂದ್ರ

ಕೋಲ್ಕತ್ತ: ಭವಿಷ್ಯದಲ್ಲಿ ದೇಶದ ಪ್ರತಿ 50 ಕಿ.ಮೀ. ಅಂತರದಲ್ಲಿ ಒಂದು ಪಾಸ್‌ಪೋರ್ಟ್ ಕೇಂದ್ರ ತೆರೆಯುವ ಯೋಜನೆ ಸರ್ಕಾರದ ಮುಂದಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಹೇಳಿದರು.

ಇಲ್ಲಿನ ಬೀಡನ್ ಸ್ಟ್ರೀಟ್ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ‘ಪಾಸ್‌ಪೋರ್ಟ್ ಕೊಡುಗೆ

ಯಲ್ಲ. ಅದು ಪ್ರತಿಯೊಬ್ಬನ ಹಕ್ಕು. ಸಾಮಾನ್ಯನಿಗೂ ಪಾಸ್‌ಪೋರ್ಟ್ ಸಿಗುವಂತಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಆಶಯ’ ಎಂದರು.

ಪ್ರತಿಕ್ರಿಯಿಸಿ (+)