ಶುಕ್ರವಾರ, ಡಿಸೆಂಬರ್ 6, 2019
17 °C

ಗೆಜೆಟೆಡ್‌ ಪ್ರೊಬೇಷನರಿ : ಹುದ್ದೆಗಳ ಸಂಖ್ಯೆ 428ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೆಜೆಟೆಡ್‌ ಪ್ರೊಬೇಷನರಿ : ಹುದ್ದೆಗಳ ಸಂಖ್ಯೆ 428ಕ್ಕೆ ಏರಿಕೆ

ಬೆಂಗಳೂರು: 2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಗೆ ಒಟ್ಟು ಹುದ್ದೆಗಳ ಸಂಖ್ಯೆ 428ಕ್ಕೆ ಏರಿದೆ.

401 ಹುದ್ದೆಗಳಿಗೆ ನೇಮಕಾತಿಗೆ ಮೇ 12ರಂದು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿತ್ತು.

ಕೆಎಎಸ್‌ (ಕಿರಿಯ ಶ್ರೇಣಿ) ಸಹಾಯಕ ಆಯುಕ್ತರ 10 ಮತ್ತು ಮುಖ್ಯಾಧಿಕಾರಿ (ಶ್ರೇಣಿ–1) 12 ಹೆಚ್ಚುವರಿ ಹುದ್ದೆಗಳನ್ನು ಸೇರಿಸಿ ಜೂನ್‌ 12ರಂದು ಕೆಪಿಎಸ್‌ಸಿ ತಿದ್ದುಪಡಿ ಅಧಿಸೂಚನೆ ಹೊರಡಿಸಿತ್ತು.

ಶನಿವಾರ ಮತ್ತೆ 5 ಸಹಾಯಕ ಆಯುಕ್ತರ  ಹುದ್ದೆಗಳನ್ನು ಈ ಪಟ್ಟಿಗೆ ಸೇರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ ಒಟ್ಟು ಹುದ್ದೆಗಳ ಸಂಖ್ಯೆ ಇದೀಗ 428 ಆಗಿದೆ.

ಪ್ರತಿಕ್ರಿಯಿಸಿ (+)