ಸೋಮವಾರ, ಡಿಸೆಂಬರ್ 16, 2019
25 °C

ಬಸ್ ಚಾಲಕನ ಸಮಯಪ್ರಜ್ಞೆ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್ ಚಾಲಕನ ಸಮಯಪ್ರಜ್ಞೆ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ

ಕುಶಾಲನಗರ (ಕೊಡಗು ಜಿಲ್ಲೆ): ಸಮೀಪದ ಗುಡ್ಡೆಹೊಸೂರು ಸಮೀಪದ ಬಿ.ಎಂ ರಸ್ತೆಯಲ್ಲಿ ಶುಕ್ರವಾರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಇದು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳೆಯು ಸಹೋದರನ ಬೈಕ್‌ನಲ್ಲಿ ಕುಶಾಲನಗರದಿಂದ ಗುಡ್ಡೆಹೊಸೂರಿಗೆ ತೆರಳುತ್ತಿದ್ದರು. ಬೊಳ್ಳೂರು ಪೆಟ್ರೋಲ್ ಬಂಕ್ ಎದುರು ರಸ್ತೆಯಲ್ಲಿ ಎಡಭಾಗದಿಂದ ಬಲಭಾಗಕ್ಕೆ ಹೋಗಲು ಬೈಕ್‌ ಏಕಾಏಕಿ ತಿರುಗಿಸಿದ್ದಾನೆ. ಆಗ ಕೆಎಸ್ಆರ್‌ಟಿಸಿ ಬಸ್ ಚಾಲಕ ಸಮಯಪ್ರಜ್ಞೆ ತೋರಿ ಬಸ್‌ಅನ್ನು ಸಂಪೂರ್ಣ ಎಡಭಾಗಕ್ಕೆ ತಿರುಗಿಸಿ ಅಪಘಾತ ತಪ್ಪಿಸಿದ್ದಾರೆ.

ಬಸ್‌ ಹಿಂಬದಿಗೆ ಬೈಕ್‌ ತಾಗಿದ ಪರಿಣಾಮ ಮಹಿಳೆ ಬಸ್‌ನಡಿ ಸಿಲುಕಿಕೊಂಡರು. ವೇಗ ಕಡಿಮೆಯಿದ್ದ ಕಾರಣ ಅಪಾಯದಿಂದ ಪಾರಾದರು. ಬಸ್‌ ನಿಂತ ಬಳಿಕ ಮಹಿಳೆಯೇ ಹೊರಗೆ ಬಂದಿದ್ದಾರೆ. ತಲೆಗೆ ಸ್ಪಲ್ಪ ತರಚಿದ ಗಾಯವಾಗಿದೆ. ಸಹೋದರನಿಗೂ ಯಾವುದೇ ತೊಂದರೆಯಾಗಿಲ್ಲ.

ಪ್ರತಿಕ್ರಿಯಿಸಿ (+)