ಭಾನುವಾರ, ಡಿಸೆಂಬರ್ 15, 2019
18 °C

‘ಪ್ರತಿಭಾವಂತರನ್ನು ಸೃಷ್ಟಿಸುತ್ತಿದ್ದೇವೆ, ಉದ್ಯೋಗವನ್ನಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರತಿಭಾವಂತರನ್ನು ಸೃಷ್ಟಿಸುತ್ತಿದ್ದೇವೆ, ಉದ್ಯೋಗವನ್ನಲ್ಲ’

ಬೆಂಗಳೂರು: ‘ಐಐಟಿ ಮತ್ತು ಐಐಎಂಗಳು ನಮ್ಮ ಪ್ರತಿಭಾವಂತರನ್ನು ಸೃಷ್ಟಿಸುತ್ತಿವೆ. ಆದರೆ, ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಗೋಜಿಗೆ ನಾವು ಹೋಗುತ್ತಿಲ್ಲ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಎಂಜಿನಿಯರಿಂಗ್‌ ವಿಭಾಗದ ಡೀನ್‌ ಎಂ.ಕೆ.ಸೂರಪ್ಪ ಅಸಮಧಾನ ವ್ಯಕ್ತಪಡಿಸಿದರು.

ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಏಳನೇ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ಮಂಗಳಯಾನ, ಅಗ್ನಿಕ್ಷಿಪಣಿ  ಹೀಗೆ ಬಾಹ್ಯಾಕಾಶದಲ್ಲಿ ಮಾಡಿರುವ ಸಾಧನೆ ಬಗ್ಗೆ ಹೆಮ್ಮೆಯಿಂದ ಬೀಗುತ್ತೇವೆ. ಅದಕ್ಕೆ ವ್ಯತಿರಿಕ್ತವಾಗಿ ಹಳ್ಳಿಯ ಶಾಲೆಯ ಬಾಲಕಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸಲು ನಮಗೆ ಸಾಧ್ಯವಾಗಿಲ್ಲ’ ಎಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್‌.ಆರ್‌.ಶೆಟ್ಟಿ, ‘ತಂತ್ರಜ್ಞಾನದ ಅಭಿವೃದ್ಧಿ ಪರಿಸರಕ್ಕೆ  ಪೂರಕವಾಗಿರಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆ ತರಬಾರದು’ ಎಂದು ತಿಳಿಸಿದರು.

ವಿವಿಧ ಎಂಜಿನಿಯರಿಂಗ್‌ ವಿಭಾಗಗಳಿಂದ ಒಟ್ಟು 813 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಎಲೆಕ್ಟ್ರಾನಿಕ್‌್ಸ ಅಂಡ್‌ ಕಮ್ಯುನಿಕೇಷನ್ಸ್‌ ವಿಭಾಗದ ವಿದ್ಯಾರ್ಥಿಗಳಾದ ಆಶಿಶ್‌ ತಿವಾರಿ  ಮತ್ತು ವಿ.ದಿವ್ಯ  ಗುಲಾಬಿ ಶೆಟ್ಟಿ ಮತ್ತು ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ನೀಡಲಾಯಿತು. ಕಂಪ್ಯೂಟರ್‌ ಸೈನ್‌್ಸ  ವಿಭಾಗದ ವಿದ್ಯಾರ್ಥಿ ಎನ್‌.ಮೋನಿಶ್‌  ಅವರಿಗೆ ಕೆ.ಎಸ್‌. ಹೆಗ್ಡೆ ಅವರ ಸ್ಮರಣಾರ್ಥ ಚಿನ್ನದ ಪದಕ ವಿತರಿಸಿದರು.

ಚಿನ್ನದ ಪದಕ ಪಡೆದ ವಿದ್ಯಾರ್ಥಿ ಗಳು: ಯೋಗಿತಾ.ಜಿ (ಸಿವಿಲ್‌), ಕರೋಲ್‌ ರೋಸಿಲಿನ್‌ ಸೆಕ್ವೇರಿಯಾ (ಮೆಕ್ಯಾನಿಕಲ್‌), ಎಂ.ಲಕ್ಷ್ಮಿ (ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್‌್ಸ),  ಸಮೀರ್‌ ದೇಸಾಯಿ (ಕಂಪ್ಯೂಟರ್‌ ಸೈ ನ್‌್ಸ ಅಂಡ್‌ ಎಂಜಿನಿಯರಿಂಗ್‌), ಆಕೃತಿ ತ್ಯಾಗಿ (ಇನ್‌ಫರ್ಮೇಶನ್‌ ಸೈನ್‌್ಸ ಅಂ ಡ್‌ ಎಂಜಿನಿಯರಿಂಗ್‌) ಹಾಗೂ ಅಪೂರ್ವ ಆನಂದ್‌ (ಏರೋನಾಟಿಕಲ್‌ ಎಂಜಿನಿಯರಿಂಗ್‌) ಅವರಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು.

ಪ್ರತಿಕ್ರಿಯಿಸಿ (+)