ಶನಿವಾರ, ಡಿಸೆಂಬರ್ 7, 2019
16 °C

‘ಬಸ್‌ ಸ್ವಚ್ಛತೆಗೆ ಕೈ ಜೋಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಸ್‌ ಸ್ವಚ್ಛತೆಗೆ ಕೈ ಜೋಡಿಸಿ’

ಉಪ್ಪಿನ ಬೆಟಗೇರಿ: ಸಾರಿಗೆ ಇಲಾಖೆಯ ಬಸ್‌ಗಳು ಸಾರ್ವಜನಿಕ ಸ್ವತ್ತು. ಅವುಗಳ ಸಂರಕ್ಷಣೆ ಮತ್ತು ಸ್ವಚ್ಛತೆಯಲ್ಲಿ ಪ್ರಯಾಣಿಕರು ಕೈ ಜೋಡಿಸಬೇಕು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮನವಿ ಮಾಡಿದರು. ಉಪ್ಪಿನ ಬೆಟಗೇರಿಗೆ ಸಮೀಪದ ಲೋಕೂರ ಗ್ರಾಮದಲ್ಲಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕರ ಅನೂಕೂಲಕ್ಕಾಗಿ ಹೊಸ ಬಸ್‌ಗಳನ್ನು ಆರಂಭಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಜನಜೀವನದ ಸಾರಿಗೆ ಸಂಪರ್ಕ ಸುಧಾರಣೆ ಜತೆಗೆ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗಲಿದೆ’ ಎಂದು ಹೇಳಿದರು. ವಾಹನಗಳಲ್ಲಿ ಸಂಚರಿಸುವ ಮೂಲಕ ಸಂಸ್ಥೆಯನ್ನು ಲಾಭ ಮಾಡಲು ಕೈ ಜೋಡಿಸಬೇಕು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ ಮಾತನಾಡಿ,‘ಈ ಭಾಗದ ಜನರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿದ ಸಾರಿಗೆ ಇಲಾಖೆ ಪ್ರತಿದಿನ ನಾಲ್ಕು ವೇಳೆ ಸಂಚರಿಸಲಿರುವ ನೂತನ ಬಸ್ ಸೌಕರ್ಯ ಕಲ್ಪಿಸಿದೆ ಎಂದು ಹೇಳಿದರು.

‘ಜವಾಬ್ದಾರಿಯುತ ನಾಗರಿಕರಾದ ನಾವೂ ಖಾಸಗಿ ವಾಹನಗಳ ಮೊರೆ ಹೋಗದೇ ಸರ್ಕಾರಿ ಸಾರಿಗೆಯನ್ನು ಬೆಂಬಲಿಸೋಣ’ ಎಂದರು.  ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಪ್ರಶಾಂತ ಕೇಕ್ರೆ, ಡಿಟಿಒ ಬಿ.ಡಿ. ಜಾಧವ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹೀರೆಹೊಳಿ, ಮಲ್ಲನಗೌಡ ಪಾಟೀಲ, ಈರಪ್ಪ ನರಶಿಂಗನವರ, ಶಿವಲಿಂಗಯ್ಯ ಹಿರೇಮಠ, ಅನಂದ ಜಾಧವ, ಆನಂದ ಕೇಶಗೊಂಡ, ಆಸೀಫ್‌ ಸನದಿ, ಶಿವಾನಂದ ಹರ್ದೊಳಿ, ಪಿಡಿಒ ಮಂಜುಳಾ ಅಂಗಡಿ, ಕಾರ್ಯದರ್ಶಿ ಬಸವರಾಜ ಮಡಿವಾಳರ ಹಾಜರಿದ್ದರು.

ಪ್ರತಿಕ್ರಿಯಿಸಿ (+)