ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ರಸ್ತೆಗಳ ಸುಧಾರಣೆಗೆ ₹14.59 ಕೋಟಿ

Last Updated 16 ಜುಲೈ 2017, 10:24 IST
ಅಕ್ಷರ ಗಾತ್ರ

ಹೂವಿನಹಡಗಲಿ : ತಾಲ್ಲೂಕಿನ ನಾಗತಿ ಬಸಾಪುರ, ಹಿರೇಕೊಳಚಿ, ಬೀರಬ್ಬಿ, ಅರಳಿಹಳ್ಳಿ ತಾಂಡಾದಲ್ಲಿ ‘ನಮ್ಮ ಗ್ರಾಮ– ನಮ್ಮ ರಸ್ತೆ’ ಯೋಜನೆಯ ರಸ್ತೆ ಕಾಮಗಾರಿಗಳಿಗೆ ಶಾಸಕ ಪಿ.ಟಿ.ಪರ ಮೇಶ್ವರನಾಯ್ಕ ಚಾಲನೆ ನೀಡಿದರು.

ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಶಾಸಕರು, ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ನಮ್ಮ ಗ್ರಾಮ ನಮ್ಮ ಯೋಜನೆ ಜಾರಿಗೊಳಿಸಿದೆ. 4ನೇ ಹಂತದ ಯೋಜನೆಯಲ್ಲಿ ತಾಲ್ಲೂಕಿನ 20.43 ಕಿ.ಮೀ. ರಸ್ತೆಗಳ ಅಭಿವೃದ್ಧಿಗೆ ₹14.59 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ಎಲ್ಲ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನಾಗತಿಬಸಾಪುರ– ಬಸರಕೋಡು ತಾಂಡಾ ರಸ್ತೆಗೆ ₹3.58 ಕೋಟಿ, ಈ ಮಾರ್ಗದಲ್ಲಿನ ಕಿರು ಸೇತುವೆಗೆ ₹53 ಲಕ್ಷ, ಹಿರೇಕೊಳಚಿ–ಹಗರನೂರು ರಸ್ತೆಗೆ ₹2.50 ಕೋಟಿ, ಬೀರಬ್ಬಿ–ಶಿಬಾರ ಕ್ರಾಸ್‌ ವರೆಗೆ ₹1.52 ಕೋಟಿ, ಅರಳಿಹಳ್ಳಿ ತಾಂಡಾ–ಮಾಗಳ – ಹಿರೇಹಡಗಲಿ ರಸ್ತೆಗೆ ₹3.54 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಸದ್ಯದಲ್ಲೇ ಈ ಕಾಮಗಾರಿಗಳು ಪ್ರಾರಂಭವಾಗಲಿದ್ದು, ರೈತರು ಹಾಗೂ ಸಾರ್ವಜನಿಕರ ಸಂಚಾ ರಕ್ಕೆ ಅನುಕೂಲವಾಗಲಿವೆ ಎಂದು ಹೇಳಿದರು.

ಕೆರೆ ತುಂಬಿಸುವ ಯೋಜನೆ ಕಾಮ ಗಾರಿಗಳು ಮುಕ್ತಾಯ ಹಂತದಲ್ಲಿವೆ. ಈಗಾಗಲೇ ಶಾಕಾರ ಜಾಕ್‌ವೆಲ್‌ ಮೂಲಕ ಹ್ಯಾರಡ, ದಾಸನಹಳ್ಳಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಹೊಸಹಳ್ಳಿ ಜಾಕ್‌ವೆಲ್‌ನಲ್ಲಿ ವಿದ್ಯುತ್ ಕಾಮಗಾರಿ ನಡೆದಿದ್ದು, ತಿಂಗಳೊಳಗೆ ಪೂರ್ಣಗೊಳಿಸಿ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ತಿಳಿಸಿದರು.

ಬರುವ ಸೆಪ್ಟಂಬರ್‌ ನಲ್ಲಿ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ, ಕೆರೆ ತುಂಬಿಸುವ ಯೋಜನೆ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಲೋಕಾರ್ಪಣೆಗೊಳಿಸಲಾಗುವುದು. ಆ ಸಂದರ್ಭದಲ್ಲಿ ₹500 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮ ಗಳ ಉದ್ಘಾಟನೆ ಹಾಗೂ ಚಾಲನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸೋಗಿ ಹಾಲೇಶ್, ಜಿ.ಪಂ. ಸದಸ್ಯೆ ಎಂ. ವೀಣಾ, ತಾ.ಪಂ. ಸದಸ್ಯರಾದ ಜೆ.ಶಿವ ರಾಜ್, ರೇಣುಕಮ್ಮ, ಎಪಿಎಂಸಿ ಅಧ್ಯಕ್ಷ ಸೊಪ್ಪಿನ ಪ್ರಕಾಶ್, ಮುಖಂಡರಾದ ಐಗೋಳ ಚಿದಾನಂದ, ಎಂ.ಪರಮೇ ಶ್ವರಪ್ಪ, ವಾರದ ಗೌಸ್‌ ಮೊಹಿದ್ದೀನ್, ಅಟವಾಳಗಿ ಕೊಟ್ರೇಶ್, ಬಿ.ಹನು ಮಂತಪ್ಪ, ಎನ್.ಕೋಟೆಪ್ಪ, ಬಸವ ನಗೌಡ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT