ಶುಕ್ರವಾರ, ಡಿಸೆಂಬರ್ 6, 2019
17 °C

ಇಶಾ ಬಿಕಿನಿ ಮತ್ತು ‘ಹಾಟ್‌’ ವಿಡಿಯೊ

Published:
Updated:
ಇಶಾ ಬಿಕಿನಿ ಮತ್ತು ‘ಹಾಟ್‌’ ವಿಡಿಯೊ

ನಟಿ ಇಶಾ ಗುಪ್ತಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿರುವ ಬಿಕಿನಿ ವಿಡಿಯೊ ವೈರಲ್ ಆಗಿದೆ. 2 ನಿಮಿಷದ ಎರಡು ವಿಡಿಯೊವನ್ನು ಇಶಾ ಹಂಚಿಕೊಂಡಿದ್ದು, ವಿಡಿಯೊದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಈ ನಟಿ.

ವಿಡಿಯೊ ಕೊನೆಯಲ್ಲಿ ಕಾಣುವ ‘ಕಮಿಂಗ್ ಸೂನ್’ ವಾಕ್ಯ, ಇಶಾ ಅವರ ಹೊಸ ಆಲ್ಬಂ ಅಥವಾ ಸಿನಿಮಾದ ವಿಡಿಯೊ ತುಣುಕು ಇದಾಗಿರಬಹುದು ಅಭಿಮಾನಿಗಳು ಊಹಿಸುವಂತೆ ಮಾಡಿದೆ.

ಇಶಾ ಗುಪ್ತಾ ತಮ್ಮ ಮೊದಲ ಚಿತ್ರ ಜನ್ನತ್ 2ದಿಂದಲೂ ಗ್ಲಾಮರಸ್ ನಟಿಯಾಗಿಯೇ ಗುರುತಿಸಿಕೊಂಡವರು. ಚಿತ್ರರಂಗಕ್ಕೆ ಬರುವ ಮಂಚೆಯೇ ಕಿಂಗ್‌ಫಿಷರ್‌ ಕ್ಯಾಲೆಂಡರ್‌ಗಾಗಿ ಬಿಕಿನಿ ಧರಿಸಿದ್ದ ಇಶಾ ತಮ್ಮ ಮಾದಕ ನೋಟದಿಂದಾಗಿಯೇ ಬಾಲಿವುಡ್‌ನಲ್ಲಿ ಅವಕಾಶ ಪಡೆದವರು. 2012ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಈ ನಟಿ ಇಲ್ಲಿವರೆಗೆ ಎಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಐದು ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ.

ಇಶಾ ಅವರ ‘ಹಾಟ್‌’ ವಿಡಿಯೊ ನೋಡಲು ಅವರ ಇನ್‌ಸ್ಟಾಗ್ರಾಂ ಖಾತೆಗೆ ಭೇಟಿ ಕೊಡಿ: bit.ly/2urc2cE

ಪ್ರತಿಕ್ರಿಯಿಸಿ (+)