ಭಾನುವಾರ, ಡಿಸೆಂಬರ್ 8, 2019
21 °C

ನಿಗೂಢ ರಾತ್ರಿ ಧಾರಾವಾಹಿ ಇಂದಿನಿಂದ

Published:
Updated:
ನಿಗೂಢ ರಾತ್ರಿ ಧಾರಾವಾಹಿ ಇಂದಿನಿಂದ

ಕನ್ನಡ ಕಿರುತೆರೆಯಲ್ಲಿ ಪತ್ತೇದಾರಿ ಕತೆಯುಳ್ಳ ಮತ್ತೊಂದು ಧಾರಾವಾಹಿಯ ಪರ್ವ ಆರಂಭವಾಗಲಿದೆ. ಜೀ ವಾಹಿನಿಯಲ್ಲಿ ಜುಲೈ 17ರ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ಕ್ಕೆ ಪ್ರಸಾರವಾಗಲಿರುವ ‘ನಿಗೂಢ ರಾತ್ರಿ’ ಧಾರಾವಾಹಿ ಪತ್ತೇದಾರಿ ಕತೆಯನ್ನು ಒಳಗೊಂಡಿದೆ.

ಈ ಧಾರಾವಾಹಿಯನ್ನು ‘ಜೋನಿ ಫಿಲ್ಮ್ಸ್’ ಸಂಸ್ಥೆ ನಿರ್ಮಿಸುತ್ತಿದ್ದು ಕಿರುತೆರೆ ಮತ್ತು ರಂಗಭೂಮಿಯ ಹಲವಾರು ಕಲಾವಿದರು ಹಾಗೂ ತಂತ್ರಜ್ಞರು  ಧಾರಾವಾಹಿ ತಂಡದಲ್ಲಿದ್ದಾರೆ. ಮತ್ತೊಂದು ಗಮನಾರ್ಹ ಅಂಶವೆಂದರೆ, ಮಾಸ್ಟರ್ ಆನಂದ್ ಅವರು ಮೊದಲನೆ ಬಾರಿಗೆ ನಿರ್ದೇಶನ ಮಾಡುತ್ತಿರುವ ಥ್ರಿಲ್ಲರ್‌ ಧಾರಾವಾಹಿಯಿದು.

ವೈಜ್ಞಾನಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದ್ದರೂ ಇಂದಿಗೂ ಭೂತ, ದೆವ್ವ ಮತ್ತು ಅತೀಂದ್ರಿಯ ಶಕ್ತಿಗಳ ಇರುವಿಕೆಯನ್ನು  ಜನ ನಂಬುತ್ತಿದ್ದಾರೆ. ಅನೇಕರ ಜೀವನದ ಭಾಗವೇ ಆಗಿರುವ ಧಾರಾವಾಹಿಗಳ ಪ್ರಮುಖ ಪಾತ್ರಧಾರಿಗಳು ತಮ್ಮ ಬದುಕಿನಲ್ಲಿ ನಡೆದ, ಇಂತಹ ವಿವರಿಸಲಾಗದ ಕೆಲವು ಸನ್ನಿವೇಶಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಮಲೆನಾಡಿನ ಹಳ್ಳಿಯೊಂದರ ಶ್ರೀಮಂತ ವ್ಯಕ್ತಿ ಸೂರ್ಯನಾರಾಯಣನ ಮನೆಯಲ್ಲಿ ಸರಣಿಯಾಗಿ ನಡೆಯುವ ವಿಚಿತ್ರ ಘಟನೆಗಳ ಕಥೆಯೇ ‘ನಿಗೂಢ ರಾತ್ರಿ’. ಮನೆಯ ಹಿರಿಯ ವ್ಯಕ್ತಿ ಸೂರ್ಯ ನಾರಾಯಣನ ಅನಿರೀಕ್ಷಿತ ಸಾವು ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡುತ್ತದೆ.

ಮನೆಯ ಸುತ್ತಲೂ ಸುತ್ತುತಿದ್ದ ಪ್ರೇತಾತ್ಮವೇ ಸೂರ್ಯನಾರಾಯಣನನ್ನು ಬಲಿ ತೆಗೆದುಕೊಂಡಿದೆ ಎಂದೇ ನಂಬುವ ಮನೆಯವರು ಈ ಎಲ್ಲಾ ಸಮಸ್ಯೆಗಳಿಂದ ಹೇಗೆ ಪಾರಾಗುತ್ತಾರೆ ಮತ್ತು ಭಯಾನಕ ಚಟುವಟಿಕೆಗಳನ್ನು ಹೇಗೆ ತಡೆಯುತ್ತಾರೆ ಎಂಬುದು ಧಾರಾವಾಹಿಯ ವಸ್ತು.

ಪ್ರತಿಕ್ರಿಯಿಸಿ (+)