ಶನಿವಾರ, ಡಿಸೆಂಬರ್ 7, 2019
25 °C
ಛಾಯಾಚಿತ್ರ ತೆಗೆಯಲು ಶುಲ್ಕ ಪಾವತಿಸಬೇಕು

ಹಂಪಿ ಚಿತ್ರ ಕ್ಲಿಕ್ಕಿಸಲು ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪಿ ಚಿತ್ರ ಕ್ಲಿಕ್ಕಿಸಲು ಅನುಮತಿ ಕಡ್ಡಾಯ

ನವದೆಹಲಿ: ಕರ್ನಾಟಕದ ಹಂಪಿ, ಉತ್ತರ ಪ್ರದೇಶದ ತಾಜ್ ಮಹಲ್‌ ಸೇರಿ ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿ ಬರುವ ಸಂರಕ್ಷಿತ ಪಾರಂಪರಿಕ ತಾಣಗಳಲ್ಲಿ, ಇನ್ನು ಮುಂದೆ ಹಲವು ಲೆನ್ಸ್‌ಗಳು ಮತ್ತು ಟ್ರೈಪಾಡ್‌ಗಳನ್ನು ಬಳಸಿ ಛಾಯಾಚಿತ್ರ ತೆಗೆಯಲು 15 ದಿನ ಮೊದಲೇ ಅನುಮತಿ ಪಡೆದುಕೊಳ್ಳಬೇಕು. ಜತೆಗೆ ಶುಲ್ಕವನ್ನೂ ಪಾವತಿಸಬೇಕು. ಈ ಸಂಬಂಧ ಇಲಾಖೆ ಅಧಿಸೂಚನೆ ಹೊರಡಿಸಿದೆ.

* ಆದಾಯ ಹೆಚ್ಚಿಸುವ ಉದ್ದೇಶ.

* ಮೊನೊಪ್ಯಾಡ್‌, ಫ್ಲ್ಯಾಶ್‌ಲೈಟ್‌ಗಳ ಬಳಕೆಗೂ ಪೂರ್ವ ಅನುಮತಿ ಮತ್ತು ಶುಲ್ಕ ಕಡ್ಡಾಯ. ಲೆನ್ಸ್‌ ಬದಲಿಸದೆ ಕ್ಯಾಮೆರಾ ಬಳಸಲು ನಿರ್ಬಂಧ ಇಲ್ಲ.

* ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಕ್ಕಾಗಿ ಟ್ರೈಪಾಡ್, ಮೊನೊಪ್ಯಾಡ್, ಹಲವು ಲೆನ್ಸ್‌ಗಳು ಮತ್ತು ಫ್ಲ್ಯಾಶ್‌ ಬಳಕೆಗೆ ಶುಲ್ಕ ಇಲ್ಲ. ಆದರೆ ಪೂರ್ವಾನುಮತಿ ಕಡ್ಡಾಯ.

* ಮೊಬೈಲ್‌ ಫೋನ್‌ಗಳಲ್ಲಿ ಚಿತ್ರ ತೆಗೆಯಲು ಪೂರ್ವಾನುಮತಿ ಬೇಕಿಲ್ಲ, ಶುಲ್ಕ ಇಲ್ಲ. ಆದರೆ, ಆ ಚಿತ್ರಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ.

* ಸೆಲ್ಫಿ ಸ್ಟಿಕ್‌ಗಳ ಬಳಕೆ ನಿಷೇಧ.

* ವಾಣಿಜ್ಯ ಉದ್ದೇಶಕ್ಕೆ ಬಳಸುವ ಪ್ರತಿ ಚಿತ್ರಕ್ಕೆ ₹ 750 ಶುಲ್ಕ.

*  ವಿಡಿಯೊ ಚಿತ್ರೀಕರಣಕ್ಕೆ ಮೊದಲು ₹ 50,000 ಶುಲ್ಕ ಪಾವತಿಸಬೇಕು. ಜತೆಗೆ, ₹ 10,000 ಭದ್ರತಾ ಠೇವಣಿ ಇಡಬೇಕು (ಚಿತ್ರೀಕರಣದ ನಂತರ ಭದ್ರತಾ ಠೇವಣಿ ವಾಪಸ್‌ ಮಾಡಲಾಗುತ್ತದೆ).

*  ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳ ಸಿಬ್ಬಂದಿಗಳೇ ಚಿತ್ರೀಕರಣ ನಡೆಸಿದರೆ, ಶುಲ್ಕ ವಿನಾಯತಿಗೆ ಅವಕಾಶ ಇದೆ.

ಪ್ರತಿಕ್ರಿಯಿಸಿ (+)