ಸೋಮವಾರ, ಡಿಸೆಂಬರ್ 16, 2019
18 °C

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ವಹಿವಾಟು ಅಲ್ಪ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ವಹಿವಾಟು ಅಲ್ಪ ಏರಿಕೆ

ನವದೆಹಲಿ: ನೋಟು ರದ್ದತಿಯ ನಂತರ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮೂಲಕ ನಡೆಯುವ ವಹಿವಾಟು ಪ್ರಮಾಣ ಕೇವಲ ಶೇ 7ರಷ್ಟು ಏರಿಕೆ ಕಂಡಿದೆ.

2016ರ ನವೆಂಬರ್‌ನಲ್ಲಿ  68 ಲಕ್ಷದಷ್ಟಿದ್ದ ಡೆಬಿಟ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮೂಲಕ ನಡೆಯುವ ವಹಿವಾಟು 2017ರ ಮೇ ವೇಳೆಗೆ 73 ಲಕ್ಷಕ್ಕೆ ತಲುಪಿದೆ. ಅಂದರೆ, ಎಂಟು ತಿಂಗಳಲ್ಲಿ ಕೇವಲ ಐದು ಲಕ್ಷದಷ್ಟು ಹೆಚ್ಚಾಗಿದೆ.

ಆದರೆ, ಇದೇ ಅವಧಿಯಲ್ಲಿ ಒಟ್ಟಾರೆ ಡಿಜಿಟಲ್‌ ವಹಿವಾಟು  2.24 ಕೋಟಿಯಿಂದ  2.75 ಕೋಟಿ  ತಲುಪುವ ಮೂಲಕ  ಶೇ 23ರಷ್ಟು ಏರಿಕೆ  ಕಂಡಿದೆ.

ಆರ್ಥಿಕ ವ್ಯವಹಾರಗಳ ಮೇಲಿನ ಸಂಸದೀಯ ಸ್ಥಾಯಿ ಸಮಿತಿ ಎದುರು ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಮಂಡಿಸಿದ ‘ನೋಟು ರದ್ದತಿ ಮತ್ತು ಡಿಜಿಟಲ್‌ ಆರ್ಥಿಕ ವ್ಯವಸ್ಥೆಯತ್ತ ದಾಪುಗಾಲು’ ವರದಿಯಲ್ಲಿ ಈ ಅಂಕಿ,ಸಂಖ್ಯೆಗಳನ್ನು ನೀಡಿದ್ದಾರೆ.

ಏಕೀಕೃತ ಪಾವತಿ ಸಂಪರ್ಕ ವಿಧಾನವಾದ ಯುಪಿಐ ಮೊಬೈಲ್ ಪಾವತಿ  ಮೂಲಕ ನಡೆದ  ವಹಿವಾಟಿನಲ್ಲಿ ಭಾರಿ ಏರಿಕೆ ಕಂಡು ಬಂದಿದೆ. 

2016ರ ನವೆಂಬರ್‌ನಲ್ಲಿ ಪ್ರತಿ ದಿನ ಒಂದು ಲಕ್ಷದಷ್ಟಿದ್ದ ಯುಪಿಐ ವಹಿವಾಟು ಪ್ರಮಾಣ 2017ರ ಮೇ ವೇಳೆಗೆ ಪ್ರತಿದಿನದ ವಹಿವಾಟು 30 ಲಕ್ಷಕ್ಕೆ ಏರಿದೆ.

ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದ ಆನ್‌ಲೈನ್‌ ತ್ವರಿತ ಪಾವತಿ ಸೇವೆ (ಐಎಂಪಿಎಸ್) ಬಳಕೆ ಬಹುತೇಕ ದ್ವಿಗುಣಗೊಂಡಿದೆ.

ಪ್ರತಿಕ್ರಿಯಿಸಿ (+)