ಭಾನುವಾರ, ಡಿಸೆಂಬರ್ 8, 2019
21 °C

ಐಐಟಿ ಫಲಿತಾಂಶ ತಡೆಹಿಡಿಯಬಹುದೇ?

ಪಿಟಿಐ Updated:

ಅಕ್ಷರ ಗಾತ್ರ : | |

ಐಐಟಿ ಫಲಿತಾಂಶ ತಡೆಹಿಡಿಯಬಹುದೇ?

ನವದೆಹಲಿ: ಲೈಂಗಿಕ  ಕಿರುಕುಳ ಪ್ರಕರಣದಲ್ಲಿ ಕಾಲೇಜಿನಿಂದ ಉಚ್ಚಾಟಿತನಾದ ಅಂತಿಮ ವರ್ಷದ ವಿದ್ಯಾರ್ಥಿಯ ಫಲಿತಾಂಶವನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ತಡೆ ಹಿಡಿಯಬಹುದೇ ಎನ್ನುವುದನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಈ ಕುರಿತು  ಕೇಂದ್ರ ಸರ್ಕಾರ ಮತ್ತು ಕಾನ್ಪುರ ಐಐಟಿಗೆ ನೋಟಿಸ್‌ ಜಾರಿ ಮಾಡಿದೆ. ವಿದ್ಯಾರ್ಥಿನಿಗೆ 2012ರಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕಾನ್ಪುರ ಐಐಟಿ ಭೌತಶಾಸ್ತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯನ್ನು 2016ರಲ್ಲಿ ಕಾಲೇಜಿನಿಂದ ಉಚ್ಚಾಟಿಸಲಾಗಿತ್ತು.

ಆತನ ಅಂತಿಮ ಸೆಮಿಸ್ಟರ್ ಫಲಿತಾಂಶ ತಡೆಹಿಡಿದಿತ್ತು. ನ್ಯಾಯ ಕೊಡಿಸುವಂತೆ ಕೋರಿ ಆತ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾನೆ. 

ವಿದ್ಯಾರ್ಥಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ ತಳ್ಳಿ ಹಾಕಿತ್ತು.

ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಆತನ ಅಂತಿಮ ಸೆಮಿಸ್ಟರ್‌ ಫಲಿತಾಂಶ ನೀಡುವಂತೆ ಆತನ ಪರ ವಕೀಲರು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)