ಸೋಮವಾರ, ಡಿಸೆಂಬರ್ 16, 2019
17 °C

ಸಿಕ್ಕಿಂ: ಮಾಜಿ ಸಿ.ಎಂ ನರ ಬಹಾದೂರ್‌ ಭಂಡಾರಿ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಸಿಕ್ಕಿಂ:  ಮಾಜಿ ಸಿ.ಎಂ ನರ ಬಹಾದೂರ್‌ ಭಂಡಾರಿ ನಿಧನ

ಗ್ಯಾಂಗ್ಟಕ್‌ : ಸಿಕ್ಕಿಂ ಮಾಜಿ ಮುಖ್ಯಮಂತ್ರಿ ನರ ಬಹಾದೂರ್‌ ಭಂಡಾರಿ(77) ಅವರು ಭಾನುವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ,ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಭಂಡಾರಿ ಅವರು ರಾಜಕೀಯ ಪ್ರವೇಶಿಸುವ ಮುನ್ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಮೊದಲ ಬಾರಿಗೆ 1979ರಲ್ಲಿ  ಜನತಾ ಪರಿಷತ್‌ನಿಂದ ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿಯಾಗಿದ್ದ ಅವರು ನಂತರ ತಾವೇ ಸ್ಥಾಪಿಸಿದ ಸಿಕ್ಕಿಂ ಸಂಗ್ರಾಂ ಪರಿಷತ್‌ ಪಕ್ಷದಿಂದ 1984, 1989ರಲ್ಲಿ ಆಯ್ಕೆಯಾಗಿ ಪುನಃ ಮುಖ್ಯಮಂತ್ರಿಯಾಗಿದ್ದರು.

ಪ್ರತಿಕ್ರಿಯಿಸಿ (+)