ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರು ತನಿಖೆಗೆ ಶಿಫಾರಸು

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪನಾಮ ಪೇಪರ್ಸ್‌ ಪ್ರಕರಣದ ತನಿಖೆ ನಡೆಸಿದ ಜಂಟಿ ತನಿಖಾ ಸಮಿತಿಯು (ಜೆಐಟಿ) ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್‌ ವಿರುದ್ಧದ 15 ಪ್ರಕರಣಗಳ ಬಗ್ಗೆ ಮರು ತನಿಖೆ ನಡೆಸುವಂತೆ ಶಿಫಾರಸು ಮಾಡಿದೆ.

1990ರಲ್ಲಿ ಷರೀಫ್‌ ಮತ್ತು ಅವರ ಕುಟುಂಬದರು ಲಂಡ್‌ನಲ್ಲಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎನ್ನುವ ಅಂಶವನ್ನು ಜೆಐಟಿ ಈಚೆಗೆ ಸಲ್ಲಿಸಿದ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.

ಷರೀಫ್ ಅವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ಲಂಡನ್‌ನಲ್ಲಿ ಆಸ್ತಿ  ಖರೀದಿಸಿದ್ದಾರೆ. ಅಲ್ಲದೆ  ಕಂಪೆನಿಗಳನ್ನು ಸ್ಥಾಪಿಸಿದ್ದು, ಈ ಎಲ್ಲವೂ ಮಕ್ಕಳ ಹೆಸರಿನಲ್ಲಿವೆ ಎಂಬ ಅಂಶ ಪನಾಮ ಪೇಪರ್ಸ್‌ ಸೋರಿಕೆಯಿಂದ ಬಹಿರಂಗವಾಗಿತ್ತು.

ಈ ಕುರಿತು ತನಿಖೆ ನಡೆಸಿದ ಆರು ಸದಸ್ಯರನ್ನೊಳಗೊಂಡ ಜಂಟಿ ತನಿಖಾ ಸಮಿತಿ ಜುಲೈ 10ರಂದು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದೆ.
ಆದರೆ, ಈ ವರಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಷರೀಫ್‌, ಇದು ಸುಳ್ಳು ಹಾಗೂ ಆಧಾರರಹಿತ ಎಂದಿದ್ದಾರೆ.

‘ದಿ ಡಾನ್‌’ ಪತ್ರಿಕೆ ಈ ಕುರಿತು ವರದಿ ಮಾಡಿದ್ದು, ವಿಶೇಷ ತನಿಖಾ ತಂಡವು ಹಳೆಯ 15 ಪ್ರಕರಣಗಳ ಮರು ತನಿಖೆಗೆ ಕೋರಿದೆ. ಇದರಲ್ಲಿ ಲಾಹೋರ್‌ ಹೈಕೋರ್ಟ್‌ ಈಗಾಗಲೇ ತೀರ್ಪು ನೀಡಿರುವ ಐದು, ತನಿಖೆ ಹಂತದಲ್ಲಿರುವ 8 ಹಾಗೂ ಪ್ರಧಾನಿ ಷರೀಫ್‌ ಮೇಲಿರುವ ಎರಡು ಪ್ರಕರಣಗಳೂ ಸೇರಿವೆ.

ಈ ಪ್ರಕರಣಗಳು 1994ರಿಂದ 2011ರ ನಡುವೆ ದಾಖಲಾಗಿವೆ. ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಮೂರು ಹಾಗೂ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರು 12 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT