ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

ಪೆರುಮಾಳ್ ಅವರ ಶತಮಾನೋತ್ಸವ
Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗಾಂಧಿ–ಕಾಮರಾಜ್ ಸ್ಮಾರಕ ಟ್ರಸ್ಟ್‌ ವತಿಯಿಂದ ಪ್ರಕಾಶನಗರದಲ್ಲಿ ಭಾನುವಾರ ಕೆ.ಕಾಮರಾಜ್ ಅವರ 115ನೇ ಜನ್ಮದಿನಾಚರಣೆ ಹಾಗೂ ಗಾಂಧಿ ವಿದ್ಯಾಶಾಲಾ ಸಂಸ್ಥಾಪಕ ಎಂ.ಪೆರುಮಾಳ್ ಅವರ ಶತಮಾನೋತ್ಸವ ಆಚರಿಸಲಾಯಿತು.

ಪ್ರಕಾಶನಗರ ಹಾಗೂ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ 150 ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಹಾಗೂ ನೋಟ್‌ಬುಕ್‌ಗಳನ್ನು ನೀಡಿ, ಸಿಹಿ ಹಂಚಲಾಯಿತು.

ಶಾಸಕ ಎಸ್.ಸುರೇಶ್ ಕುಮಾರ್, ‘ಕೆ.ಕಾಮರಾಜ್ ಅವರು ಓದಿದ್ದು ಕಡಿಮೆ. ಸಜ್ಜನ ಹಾಗೂ ಸರಳ ವ್ಯಕ್ತಿತ್ವದ ಅವರು ದೇಶದ ಮಹಾನ್ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಸಮಾಜವನ್ನೇ ಕುಟುಂಬವೆಂದು ಭಾವಿಸಿ ಸಮಾನ ಶಿಕ್ಷಣಕ್ಕಾಗಿ ಹೋರಾಡಿದ್ದರು’ ಎಂದು ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಘಟಕದ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ‘ಸಮಾಜಸೇವೆ ಮಾಡಬಯಸುವ ಜನರಿಗೆ ಕಾಮರಾಜ್ ಅವರು ಉತ್ತಮ ನಿದರ್ಶನ. ಅವರ ಚರಿತ್ರೆಯನ್ನು ಯುವಕರು ಅರಿಯಬೇಕು. ವಿದ್ಯಾಭ್ಯಾಸ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ತಮಿಳುನಾಡು ಬೆಳವಣಿಗೆ ಹೊಂದಲು ಅವರೇ ಕಾರಣ. ಎಲ್ಲರಿಗೂ ಶಿಕ್ಷಣ ದೊರೆಯಲು 13 ಸಾವಿರ ಶಾಲೆಗಳನ್ನು ಪ್ರಾರಂಭಿಸಿದರು ಹಾಗೂ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ದೂ ಅವರೇ’ ಎಂದರು.

* ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು. ಕಾಮರಾಜ್’ ಪೆರುಮಾಳ್ ಆಶಯವೂ ಅದೇ ಆಗಿತ್ತು

–ಮಾ.ನಟರಾಜ್, ಗಾಂಧಿ–ಸ್ಮಾರಕ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT