ಸೋಮವಾರ, ಡಿಸೆಂಬರ್ 9, 2019
23 °C
ಕಿಂಗ್‌ಫಿಶರ್‌ ಅಲ್ಟ್ರಾ ಡರ್ಬಿ ಬೆಂಗಳೂರು; ಕುತೂಹಲದಲ್ಲಿ ಪಾಲ್ಗೊಂಡ ರೇಸ್ ಪ್ರಿಯರು

‘ಮ್ಯಾನಿಫೋಲ್ಡ್‌’ಗೆ ಡರ್ಬಿ ಪ್ರಶಸ್ತಿ

Published:
Updated:
‘ಮ್ಯಾನಿಫೋಲ್ಡ್‌’ಗೆ ಡರ್ಬಿ ಪ್ರಶಸ್ತಿ

ಬೆಂಗಳೂರು: ರೇಸ್‌ ಪ್ರಿಯರಲ್ಲಿ ಬಾರಿ ಕುತೂಹಲ ಕೆರಳಿಸಿದ್ದ ಭಾನುವಾರದ ‘ಕಿಂಗ್‌ಫಿಶರ್‌ ಅಲ್ಟ್ರಾ ಡರ್ಬಿ ಬೆಂಗಳೂರು’ ರೇಸ್‌ನಲ್ಲಿ ‘ಮ್ಯಾನಿಫೋಲ್ಡ್‌’ ಪ್ರಶಸ್ತಿ ಗೆದ್ದುಕೊಂಡಿತು. ಮುಂಬೈ ಸ್ಪರ್ಧಿಯಾಗಿದ್ದ ಈ ಕುದುರೆಗೆ ಪೆಸಿ ಶ್ರಾಫ್‌ ಅವರು ತರಬೇತಿ ನೀಡಿದ್ದರು.

2000 ಮೀಟರ್ಸ್‌ ದೂರದ ಈ ಡರ್ಬಿ ಕ್ರಮಿಸಲು ‘ಮ್ಯಾನಿಫೋಲ್ಡ್‌’ ಎರಡು ನಿಮಿಷ 03.21 ಸೆಕೆಂಡ್ಸ್‌ ತೆಗೆದುಕೊಂಡಿದೆ. ಕ್ಲಾಸಿಕ್‌ ಡಬಲ್‌ ಸಂಪಾದಿಸಿದ ಗೌರವಕ್ಕೂ ಪಾತ್ರವಾಯಿತು. ಸುಮಾರು ₹ 3 ಲಕ್ಷ ಮೌಲ್ಯದ ಆಕರ್ಷಕ ಟ್ರೋಫಿ ಮತ್ತು ಮೊದಲನೇ ಬಹುಮಾನದ ₹ 1,58 ಕೋಟಿಯನ್ನು ತನ್ನ ಮಾಲೀಕರಾದ ಅಮಿತಾ ಮೆಹ್ರಾ ಅವರಿಗೆ ದೊರಕಿಸಿಕೊಟ್ಟಿದೆ.

ಈ ರೇಸ್‌ನಲ್ಲಿ ಮ್ಯಾನಿಫೋಲ್ಡ್‌ಗೆ ಸಾಕಷ್ಟು ಪೈಪೋಟಿ ಇತ್ತು. ಕೋಲ್ಟ್ಸ್‌ ಚಾಂಪಿಯನ್‌ಷಿಪ್ ಸ್ಟೇಕ್ಸ್ ವಿಜೇತ ‘ಕ್ಯಾಸಲ್‌ಬ್ರಿಡ್ಜ್‌’ ಮತ್ತು ‘ಫಿಲ್ಲೀಸ್‌ ಚಾಂಪಿಯನ್‌ಶಿಪ್‌ ಸ್ಟೇಕ್ಸ್‌’ ವಿಜೇತೆ ‘ಮ್ಯಾನಿಫೋಲ್ಡ್‌’ ಈ ಡರ್ಬಿ ಗೆಲ್ಲುವ ಮೊದಲನೇ ಮತ್ತು ಎರಡನೇ ಫೇವರೆಟ್‌ಗಳಾಗಿದ್ದವು. ‘ಒಲಂಪಿಯಾ ಫೀಲ್ಡ್ಸ್‌’, ‘ಶಮಾನ್‌’ ಮತ್ತು ‘ಪರ್ಫೆಕ್ಟ್‌ ಸ್ಟಾರ್‌’ ನಂತರದ ಬೇಡಿಕೆಯಲ್ಲಿದ್ದವು.

ಬಿ.ಟಿ.ಸಿ. ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಸುಮಾರು 16,000 ಕ್ಕಿಂತಲೂ ಹೆಚ್ಚು ರೇಸ್‌ಪ್ರಿಯರ ಸಮಕ್ಷಮದಲ್ಲಿ ಡರ್ಬಿಗೆ ಚಾಲನೆ ದೊರೆತ ಕೂಡಲೇ ಕೋಲ್ಕತ್ತ ಸ್ಪರ್ಧಿ ‘ಕ್ಯಾಸಲ್‌ಬ್ರಿಡ್ಜ್‌’ ಜಾಕಿ ಟ್ರೆವರ್‌ ಪಟೇಲ್‌ ಸವಾರಿಯಲ್ಲಿ ಮುನ್ನುಗ್ಗಿ ಲೀಡ್‌ ಪಡೆದಿತ್ತು.

ಕೊನೆಯ 400 ಮೀಟರ್ಸ್‌ ನೇರ ಓಟದಲ್ಲಿ ತನ್ನ ಲೀಡ್‌ ಹೆಚ್ಚಿಸಿಕೊಂಡು ಮತ್ತಷ್ಟು ವೇಗವಾಗಿ ಓಡಿತ್ತು. ಆ ಸಮಯದಲ್ಲಿ, ಆರನೇ ಅಥವಾ ಏಳನೇ ಸ್ಥಾನದಲ್ಲಿ ಓಡುತ್ತಿದ್ದ ‘ಮ್ಯಾನಿಫೋಲ್ಡ್‌’ ಜಾಕಿ ನೀರಜ್‌ ಸವಾರಿಯಲ್ಲಿ ಕ್ರಮೇಣವಾಗಿ ವೇಗವನ್ನು ಹೆಚ್ಚಿಸಿಕೊಂಡು ಕೊನೆಯ 300 ಮೀಟರ್ಸ್‌ ಇರುವಂತೆಯೇ ಪೈಪೋಟಿ ನೀಡಲು ಮುನ್ನುಗ್ಗಿ ಬಂದರೂ. ‘ಕ್ಯಾಸಲ್‌ ‌ ಬ್ರಿಡ್ಜ್‌’ ತನ್ನ ಲೀಡ್‌ ಕಾಪಾಡಿಕೊಂಡಿತ್ತು.

ಆದರೆ, ಜಾಕಿ ನೀರಜ್‌ ಅವರ ಧೃಡಸಂಕಲ್ಪ ಹಾಗೂ ಛಲ ಬಿಡದ ಪ್ರಯತ್ನದಿಂದ ‘ಮ್ಯಾನಿಫೋಲ್ಡ್’ ಕೊನೆಯ ಕೆಲವು ಮೀಟರ್ಸ್‌ಗಳಲ್ಲಿ ‘ಕ್ಯಾಸಲ್‌ಬ್ರಿಡ್ಜ್‌’ ಅನ್ನು ಅರ್ಧ ಲೆಂಗ್ತ್‌ ಗಳಿಂದ ಹಿಂದಿಕ್ಕಿ ರೋಚಕ ಜಯಗಳಿಸಿತು.

ಜಾಕಿ ಜಾನ್‌ ಅವರು ಅಪಾರ ಪ್ರಯತದ ನಂತರವೂ ‘ಒಲಂಪಿಯಾ ಫೀಲ್ಡ್ಸ್‌’ ಮೂರನೇ ಸ್ಥಾನ ಪಡೆಯುವಲ್ಲಿ ಸಫಲವಾಯಿತು. ‘ಕಾಂಗ್ರಾ’ ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿನ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆಯಿತು. ಯುನೈಟೆಡ್‌ ಬ್ರೂವರೀಸ್‌ ಮಾರ್ಕೆಟಿಂಗ್‌ ವ್ಯವಸ್ಥಾಪಕ ನಿರ್ದೇಶಕರಾದ ಸಮೀರ್‌ಸಿಂಗ್‌ ಶೆಕಾವತ್‌ ಅವರು  ಪ್ರಶಸ್ತಿ ವಿತರಿಸಿದರು.

ಬೈರಾಮ್ಜಿಗೆ ಸನ್ಮಾನ

ಕುದುರೆ ರೇಸ್‌ ಕ್ಷೇತ್ರದಲ್ಲಿ  ಐದು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಟ್ರೈನರ್‌ ಆಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದ  ರಶೀದ್ದ್‌ ಬೈರಾಮ್ಜಿ  ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರೇಸ್‌ ಕುದುರೆ ಮಾಲೀಕರ ಸಂಸ್ಥೆ ಮತ್ತು ಜಾಕೀಸ್‌ ಸಂಸ್ಥೆಗಳ ವತಿಯಿಂದಲೂ   ಬೈರಾಮ್ಜಿಯವರನ್ನು ಸನ್ಮಾನಿಸಲಾಯಿಉ.  ರಷೀದ್‌ ಬೈರಾಮ್ಜಿಯವರು ತಮ್ಮ ಟ್ರೈನರ್‌ ವೃತ್ತಿಪರ ಜೀವನದಲ್ಲಿ 3170 ಬಾರಿ ಗೆದ್ದಿದ್ದಾರೆ. ಇವುಗಳಲ್ಲಿ 230 ಕ್ಲಾಸಿಕ್‌ ರೇಸ್‌ಗಳು ಮತ್ತು 10 ಇನ್ವಿಟೇಶನ್‌ ಕಪ್‌ಗಳು ಸೇರಿವೆ.

ರೇಸ್‌ ಅಭಿಮಾನಿಗಳ ಸಂಭ್ರಮ: ಚಿತ್ರಗಳು/ಆರ್‌. ಶ್ರೀಕಂಠ ಶರ್ಮಾ

ಪ್ರತಿಕ್ರಿಯಿಸಿ (+)