ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ: 100 ಎ.ಸಿ. ಬಸ್‌ಗಳ ಖರೀದಿ ರದ್ದು

Last Updated 16 ಜುಲೈ 2017, 19:54 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) 100 ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಖರೀದಿಗೆ ನೀಡಿದ್ದ ಕಾರ್ಯಾದೇಶ ಪತ್ರವನ್ನು ರದ್ದುಪಡಿಸಿದೆ.

ಸಂಸ್ಥೆಯು ಒಟ್ಟು 250 ಎ.ಸಿ. ವೋಲ್ವೊ ಬಸ್‌ಗಳನ್ನು ಖರೀದಿ ಮಾಡಲು ತೀರ್ಮಾನಿಸಿತ್ತು. ಈ ಪೈಕಿ 150 ಬಸ್‌ಗಳನ್ನು ನರ್ಮ್‌ ಯೋಜನೆಯಡಿ ಖರೀದಿ ಮಾಡಲಾಗುತ್ತಿದೆ. ಇದರಲ್ಲಿ 125 ಬಸ್‌ಗಳನ್ನು ಕಂಪೆನಿ ಈಗಾಗಲೇ ಪೂರೈಕೆ ಮಾಡಿದೆ. ಕೆಲವು ಕಾರಣಗಳಿಂದ ಉಳಿದ 25 ಬಸ್‌ಗಳ ಪೂರೈಕೆಗೆ ತಡೆ ಒಡ್ಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಸಂಸ್ಥೆಯು 100 ಎ.ಸಿ. ಬಸ್‌ಗಳ ಖರೀದಿಗೆ ಟೆಂಡರ್‌ ಕರೆದಿತ್ತು. ಕಡಿಮೆ ಮೊತ್ತಕ್ಕೆ ಬಿಡ್‌ ಮಾಡಿ ಟೆಂಡರ್‌ ಪಡೆಯುವಲ್ಲಿ ವೋಲ್ವೊ ಕಂಪೆನಿ ಯಶಸ್ವಿಯಾಗಿತ್ತು. ಕಂಪೆನಿಗೆ ಖರೀದಿ ಕಾರ್ಯಾದೇಶ ನೀಡಲು ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಪರೀಕ್ಷಾರ್ಥ ಸಂಚಾರ ಯಶಸ್ವಿಯಾದ ಬಳಿಕವಷ್ಟೇ ಬಸ್‌ಗಳನ್ನು ಪೂರೈಸಬೇಕು ಎಂಬ ಷರತ್ತನ್ನೂ ವಿಧಿಸಲಾಗಿತ್ತು. ಆದರೆ, ಈ ಬಸ್‌ ಇಂಧನ ಕಾರ್ಯಕ್ಷ
ಮತೆಯಲ್ಲಿ ಉತ್ತೀರ್ಣ ಆಗಿರಲಿಲ್ಲ. ಹೀಗಾಗಿ 100 ಬಸ್‌ಗಳ ಖರೀದಿಯಿಂದ ಹಿಂದಕ್ಕೆ ಸರಿಯಲಾಗಿದೆ’ ಎಂದರು.

‘ಇಂಧನ ಕಾರ್ಯಕ್ಷಮತೆಯ ಪರೀಕ್ಷೆಯಲ್ಲಿ ಅನುತ್ತೀರ್ಣ ಆದ ಕಾರಣಕ್ಕೆ ಖರೀದಿ ಪ್ರಕ್ರಿಯೆ ರದ್ದುಪಡಿಸಲಾಗಿದೆ. ಸಾರಿಗೆ ಸಚಿವರ ಒಪ್ಪಿಗೆ ಪಡೆದು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT