ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡಿಗರ ಪ್ರೀತಿಯೇ ನನಗೆ ಹೆಚ್ಚು’

Last Updated 16 ಜುಲೈ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಜಗತ್ತಿನಲ್ಲಿ ಸಿಗುವ ಎಲ್ಲರ ಪ್ರೀತಿಗಿಂತ, ಕನ್ನಡಿಗರು ನೀಡಿದ ಪ್ರೀತಿ ಹಾಗೂ ಗೌರವ ದೊಡ್ಡದು’ ಎಂದು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ  ಸಂತೋಷ ವ್ಯಕ್ತಪಡಿಸಿದರು.

ಕರ್ನಾಟಕ ತೆಲುಗು ಅಕಾಡೆಮಿ ಪುರಭವನದಲ್ಲಿ  ಆಯೋಜಿಸಿದ್ದ ಎನ್‌.ಟಿ. ರಾಮರಾವ್‌ ಅವರ 95ನೇ ಜಯಂತಿ  ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಎನ್‌ಟಿಆರ್ ಅವರು ನಿಜಜೀವನದಲ್ಲಿ ಎಂದಿಗೂ ನಟನೆ ಮಾಡಿದವರಲ್ಲ. ಅವರ ಹೆಸರಿನಲ್ಲಿ ನೀಡಿರುವ ಈ ಪ್ರಶಸ್ತಿ ಪಡೆಯಲು ಸಂತಸವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯೆ  ಜಯಮಾಲಾ, ‘ಚಿತ್ರರಂಗಕ್ಕೆ ಬಂದು 44 ವರ್ಷಗಳಾಗಿವೆ. ಈ ಪ್ರಶಸ್ತಿ ಸಾರ್ಥಕತೆ ತಂದಿದೆ. ಹೈದರಾಬಾದ್‌ನಲ್ಲಿ ಶೂಟಿಂಗ್ ಹೋಗುತ್ತಿದ್ದ ವೇಳೆ ಎನ್‌ಟಿಆರ್ ಅವರನ್ನು ಭೇಟಿ ಮಾಡುತ್ತಿದ್ದೆ. ಅವರ ಸರಳ ಗುಣ ಆದರ್ಶವಾಗಿತ್ತು’ ಎಂದು ಸ್ಮರಿಸಿಕೊಂಡರು.

ಹಿರಿಯ ರಾಜಕಾರಣಿ ಎಂ.ರಘುಪತಿ, ‘ಎನ್‌ಟಿಆರ್, ಡಾ.ರಾಜ್‌ಕುಮಾರ್ ಹಾಗೂ ಎಂ.ಜಿ.ರಾಮಚಂದ್ರನ್ ಮೂರು ರತ್ನಗಳಿದ್ದಂತೆ. ಈ ತ್ರಿಮೂರ್ತಿಗಳ ಪುತ್ಥಳಿಗಳನ್ನು ತಿರುಪತಿ, ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಒಟ್ಟಿಗೆ ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT