ಭಾನುವಾರ, ಡಿಸೆಂಬರ್ 8, 2019
21 °C

ಮಳೆಗಾಗಿ ಪ್ರಾರ್ಥಿಸಿ ಪುಟ್ಟ ಮಕ್ಕಳಿಗೆ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಗಾಗಿ ಪ್ರಾರ್ಥಿಸಿ ಪುಟ್ಟ ಮಕ್ಕಳಿಗೆ ವಿವಾಹ

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬಿತ್ತನೆ ಕುಂಠಿತವಾಗಿದೆ. ಈ ವೇಳೆಗಾಗಲೇ ಬಿತ್ತನೆ ಕೆಲಸ ಮುಕ್ತಾಯವಾಗಬೇಕಿತ್ತು. ಆದರೆ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

ಹೀಗಾಗಿ ಗ್ರಾಮದ ಹಿರಿಯರ ಸಲಹೆಯಂತೆ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರೆಲ್ಲ ಸೇರಿ ಪುಟ್ಟ ಮಕ್ಕಳಿಗೆ ಸಂಪ್ರದಾಯದಂತೆ ವಿವಾಹ ಮಾಡಲಾಯಿತು ಎಂದು ಶಿವಪುರ ಗ್ರಾಮದ ನಿವಾಸಿ ಮಂಜುನಾಥ್‌ ತಿಳಿಸಿದ್ದಾರೆ.

ಹಿಂದೆ ಮಳೆ ಬರುವುದು ವಿಳಂಬವಾಗಿ ಬಿತ್ತನೆಗೆ ಹಿನ್ನಡೆಯಾದಾಗ, ಬೆಳೆ ಒಣಗುವ ಸಂದರ್ಭಗಳಲ್ಲಿ ಪುಟ್ಟ ಮಕ್ಕಳಿಗೆ ವಿವಾಹ ಮಾಡಲಾಗಿತ್ತು. ಆಗ ಮಳೆ ಬರುತಿತ್ತು ಎನ್ನುವ ನಂಬಿಕೆ ಎಂದರು.

ಪ್ರತಿಕ್ರಿಯಿಸಿ (+)