ಭಾನುವಾರ, ಡಿಸೆಂಬರ್ 15, 2019
23 °C

ಸಾರ್ವಜನಿಕರಿಗೆ ಶುದ್ಧ ನೀರಿನ ಕೊಡುಗೆ!

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಸಾರ್ವಜನಿಕರಿಗೆ ಶುದ್ಧ ನೀರಿನ ಕೊಡುಗೆ!

ಬಾಗಲಕೋಟೆ: ಶತಮಾನೋತ್ಸವದ ಸಂಭ್ರಮದಲ್ಲಿರುವ ಇಲ್ಲಿನ ನವನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ 100 ವಸಂತಗಳನ್ನು ಪೂರೈಸಿದ ನೆನಪಿಗೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. ಬ್ಯಾಂಕ್‌ನ ಕೇಂದ್ರ ಕಚೇರಿಯ ಆವರಣದಲ್ಲಿ ಮುಖ್ಯ ರಸ್ತೆಗೆ ಮುಖಮಾಡಿ ಶುದ್ಧ ಕುಡಿಯುವ ನೀರಿನ ಘಟಕ ಸಿದ್ಧಗೊಂಡಿದೆ. ಇನ್ನೊಂದು ವಾರದಲ್ಲಿ ಅದು ಚಾಲನೆ ಗೊಳ್ಳಲಿದೆ.

₹2 ಮುಖ ಬೆಲೆಯ ಎರಡು ನಾಣ್ಯ ಹಾಕಿದಲ್ಲಿ ನಿಗದಿತ ಪ್ರಮಾಣದ ನೀರು ಪಡೆಯಬಹುದು. ₹ 4ಕ್ಕೆ 10 ಲೀಟರ್ ಶುದ್ಧ ನೀರು ದೊರೆಯಲಿದೆ. ಈಗಾಗಲೇ ಕಟ್ಟಡ ಪೂರ್ಣಗೊಂಡಿದೆ. ಯಂತ್ರೋಪಕರಣ ಅಳವಡಿಕೆ ಮಾತ್ರ ಬಾಕಿ ಇದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಜಗದೀಶ ದುಡಗುಂಟಿ ಹೇಳುತ್ತಾರೆ.

ಶತಮಾನೋತ್ಸವ ಆಚರಣೆ ಅಂಗವಾಗಿ ಮಹಿಳೆಯರಿಗೆ ಅಲಂಕಾರ ಸ್ಪರ್ಧೆ, ಸಾಹಿತ್ಯ–ಸಾಂಸ್ಕೃತಿಕ ಸ್ಪರ್ಧೆಗಳನ್ನು ಈಗಾಗಲೇ ಆಯೋಜಿಸಿರುವ ಬ್ಯಾಂಕ್ ಆಡಳಿತ, ಜನರ ಉಪಯೋಗಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಯೋಚಿಸಿತು. ಆಗ ಹೊಳೆದದ್ದೇ ಶುದ್ಧ ಕುಡಿಯುವ ನೀರಿನ ಘಟಕದ ಸ್ಥಾಪನೆ ಎಂದು ದುಡಗುಂಟಿ ತಿಳಿಸಿದರು.

ಬ್ಯಾಂಕಿನ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾದರೆ ಸುತ್ತಲಿನ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗಲಿದೆ. ಈಗ ವಿದ್ಯಾಗಿರಿ, ಕಾಲೇಜು ವೃತ್ತ ಹಾಗೂ ಅಂಬೇಡ್ಕರ್ ಭವನದ ಬಳಿ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯಾಚರಿಸುತ್ತಿವೆ.

ಇಲ್ಲಿನ ಘಟಕ ಪೂರ್ಣಗೊಂಡರೆ ನವನಗರದ  ನಗರಸಭೆ, ಬ್ಯಾಂಕ್‌ ಸೆಕ್ಟರ್, ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಜಿಲ್ಲಾ ಆಸ್ಪತ್ರೆ, ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ, ಜಿಲ್ಲಾ ಕ್ರೀಡಾಂಗಣದ ಸುತ್ತಮುತ್ತ, ಎಲ್‌ಐಸಿ ವೃತ್ತದ ಆಸುಪಾಸಿನ ನಿವಾಸಿಗಳಿಗೆ ಕುಡಿಯಲು ನೀರು ಒಯ್ಯಲು ಇದರಿಂದ ನೆರವಾಗಲಿದೆ. ಘಟಕದ ನಿರ್ವಹಣೆಯನ್ನು ಬ್ಯಾಂಕ್‌ ವತಿಯಿಂದ ಮಾಡಲಾಗುತ್ತಿದೆ ಎಂದು ದುಡಗುಂಟಿ ತಿಳಿಸಿದರು.

₹1925 ಆರಂಭದ ಷೇರು ಬಂಡವಾಳ!

ಬೀಳೂರು ಗುರುಬಸವ ಸ್ವಾಮಿಗಳ ಆಶೀರ್ವಾದದೊಂದಿಗೆ 1917ರ ಮಾರ್ಚ್ 2ರಂದು ಶ್ರೀ ಬಸವೇಶ್ವರ ಸಹಕಾರಿ ಪತ್ತಿನ ಸಂಘದ ಹೆಸರಿನಲ್ಲಿ ಆರಂಭವಾದ ಬ್ಯಾಂಕ್, ₹1925 ಮೊತ್ತದ ಷೇರು ಬಂಡವಾಳ ಸಂಗ್ರಹದೊಂದಿಗೆ ವಹಿವಾಟು ಆರಂಭಿಸಿತ್ತು. ನಂತರ ಎಂ.ಪಿ.ನಾಡಗೌಡ, ಹಾಲಪ್ಪ ಹಾವೇರಿ, ಎಚ್.ಎಫ್.ಕಟ್ಟಿಮನಿ ಅವರ ಅವಿಶ್ರಾಂತ ಪ್ರಯತ್ನದ ಫಲವಾಗಿ 1931ರಲ್ಲಿ ಬಸವೇಶ್ವರ ಅರ್ಬನ್ ಕೊ–ಆಪ್ ಬ್ಯಾಂಕ್ ಆಗಿ ಬದಲಾಯಿತು.

ಪ್ರತಿಕ್ರಿಯಿಸಿ (+)