ಶನಿವಾರ, ಡಿಸೆಂಬರ್ 7, 2019
16 °C

ಹಾರಲಿದೆ 150 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಹಾರಲಿದೆ 150 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ!

ಬಳ್ಳಾರಿ: ಈ ಬಾರಿ ನಡೆಯಲಿರುವ 71ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಗರದ ಎಚ್‌.ಆರ್‌.ಗವಿಯಪ್ಪ ವೃತ್ತವು ಇಡೀ ಜಿಲ್ಲೆಯ ಗಮನ ಸೆಳೆಯಲಿದೆ. ಈ ವೃತ್ತವನ್ನು ವಾಹನ ಸಂಚಾರ ಸಿಗ್ನಲ್‌ ಮುಕ್ತವಾಗಿಸುವ ಕಾರ್ಯವೂ ಭರದಿಂದ ನಡೆದಿರುವ ವೇಳೆಯಲ್ಲೇ, ಇಲ್ಲಿ 150 ಅಡಿ ಎತ್ತರದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಲು ಸಿದ್ಧತೆಯೂ ನಡೆಯುತ್ತಿದೆ.

ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಈ ವೃತ್ತವು ಬೆಂಗಳೂರು, ಸಿರುಗುಪ್ಪ ಮತ್ತು ಹೊಸಪೇಟೆಯ ಪ್ರಮುಖ ಸಂಪರ್ಕ ರಸ್ತೆಗಳನ್ನು ಕೂಡಿಸುವ ಪ್ರಮುಖ ವೃತ್ತವೂ ಹೌದು.

ಇಲ್ಲಿ ಸಿಗ್ನಲ್‌ ಮುಕ್ತ ಸಂಚಾರ ವ್ಯವಸ್ಥೆ ರೂಪಿಸುವ ಸಂಬಂಧ ಒಂದು ವರ್ಷದಿಂದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಜನವರಿಯ ಗಣ ರಾಜ್ಯೋ ತ್ಸವದ ವೇಳೆಗೆ ಕಾಮಗಾರಿ ಪೂರ್ಣ ಗೊಳ್ಳಲಾಗುವುದು ಎಂದು ಪ್ರಾಧಿಕಾ ರವು ತಿಳಿಸಿತ್ತು. ಆದರೆ ಇನ್ನೂ ಪೂರ್ಣ ಗೊಂಡಿಲ್ಲ. ಇದರ ಜತೆಗೇ ಈಗ, ರಾಷ್ಟ್ರಧ್ವಜ ಸ್ತಂಭ ನಿರ್ಮಾಣ ಕಾರ್ಯ ವೂ ನಡೆದಿದೆ. ಏಕಕಾಲಕ್ಕೆ ಎರಡು ಅಭಿವೃದ್ಧಿ ಕಾರ್ಯಗಳಿಂದ ಈ ವೃತ್ತವು ನಗರದ ಜನರ ಗಮನ ಸೆಳೆಯುತ್ತಿದೆ.

ಜಿಲ್ಲಾಧಿಕಾರಿ ಅನುಮೋದನೆ: ಈ ವೃತ್ತದ ಆಕರ್ಷಣೆ ಮತ್ತು ಮಹತ್ವವನ್ನು ಹೆಚ್ಚಿಸುವ ಸಲುವಾಗಿ ಇಲ್ಲಿ 150 ಅಡಿ ಎತ್ತರದ ಧ್ವಜಸ್ತಂಭವನ್ನು ನಿರ್ಮಿಸಿ ಕೊಡುವ ಪ್ರಸ್ತಾವವನ್ನು ಎಚ್‌.ಆರ್‌ .ಗವಿಯಪ್ಪ ಕುಟುಂಬದವರು ಪ್ರಾಧಿಕಾರದ ಮುಂದೆ ಇಟ್ಟಿದ್ದರು. ಈ ಪ್ರಸ್ತಾವನೆಗೆ ಜಿಲ್ಲಾಧಿಕಾರಿ ಡಾ.ರಾಮ ಪ್ರಸಾದ್‌ ಅವರು ಅನುಮೋದನೆ ನೀಡಿದ್ದು, ಸಿವಿಲ್‌ ಕಾಮಗಾರಿ ಆರಂಭವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪ್ರಾಧಿಕಾರದ ಆಯುಕ್ತ ಎಸ್‌.ಜಹೀರ್‌ ಅಬ್ಬಾಸ್‌, ವೃತ್ತವನ್ನು ಈಗ ಎರಡು ನೆಲೆಯಲ್ಲಿ ಅಭಿವೃದ್ಧಿ ಗೊಳಿಸಲಾಗುತ್ತಿದೆ.

ಎರಡೂ ಕೂಡ ಜನರ ಗಮನ ಸೆಳೆಯುವಂಥ ಪ್ರಯತ್ನ ಗಳು. ವೃತ್ತ ಸಿಗ್ನಲ್‌ ಮುಕ್ತವಾದರೆ ಇಡೀ ನಗರದಲ್ಲಿ ಇದೊಂದು ವಾಹನ ಸವಾರರ ಸ್ನೇಹಿಯಾಗಿ ಮಾರ್ಪಡಲಿದೆ. ಅದರೊಂದಿಗೆ, ಅತಿ ಎತ್ತರದಲ್ಲಿ ಹಾರಾಡುವ ರಾಷ್ಟ್ರಧ್ವಜವೂ ನಗರದ ಘನತೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟರು.

ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೇ ರಾಷ್ಟ್ರಧ್ವಜವನ್ನು ಹಾರಿಸುವ ಉದ್ದೇಶದಿಂದ ಗವಿಯಪ್ಪ ಕುಟುಂಬ ದವರು ಮುಂದೆ ಬಂದಿದ್ದಾರೆ. ಅತಿ ಎತ್ತರದ ಸ್ತಂಭವನ್ನು ನಿಲ್ಲಿಸುವು ದರಿಂದ ಅದಕ್ಕೆ ಭದ್ರ ಬುನಾದಿ ಹಾಕುವ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು

* * 

ವೃತ್ತದಲ್ಲಿ ಬೃಹತ್ತಾದ ಧ್ವಜ ಸ್ತಂಭ ನಿರ್ಮಾಣದ ಕಾಮಗಾರಿಯನ್ನು ನಡೆಸಲು ಜಿಲ್ಲಾಧಿಕಾರಿ ಅನುಮೋದನೆ ಪಡೆದು ಅವಕಾಶ ಮಾಡಿಕೊಡಲಾಗಿದೆ

ಎಸ್‌.ಜಹೀರ್‌ ಅಬ್ಬಾಸ್‌

ಪ್ರಾಧಿಕಾರದ ಆಯುಕ್ತ

ಪ್ರತಿಕ್ರಿಯಿಸಿ (+)