ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರ ಆರೋಪ ಮಾಡಿದ್ದ ಡಿಐಜಿ ಡಿ.ರೂಪಾ ವರ್ಗಾವಣೆ

Last Updated 17 ಜುಲೈ 2017, 8:13 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರ  ಕುರಿತು ಆರೋಪಿಸಿದ್ದ ಡಿಐಜಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ಆಯುಕ್ತರಾಗಿ ಕಾರಾಗೃಹಗಳ ಇಲಾಖೆ ಡಿಐಜಿ ರೂಪಾ ಅವರನ್ನು ನೇಮಿಸಲಾಗಿದೆ. ಡಿ.ರೂಪಾ, ಡಿಜಿಪಿ ಎಂ.ಎನ್‌.ರೆಡ್ಡಿ ಸೇರಿದಂತೆ ಒಟ್ಟು ಐದು ಐಪಿಎಸ್‌ ಅಧಿಕಾರಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕಾರಾಗೃಹಗಳ ಇಲಾಖೆಯ ಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್‌ ಸ್ಥಾನಕ್ಕೆ ಎಸಿಬಿಯ ಎಡಿಜಿಪಿ ಆಗಿರುವ ಎನ್‌.ಎಸ್‌.ಮೇಘರಿಖ್‌ ಅವರನ್ನು ನೇಮಿಸಲಾಗಿದ್ದು, ಸತ್ಯನಾರಾಯಣ ಅವರನ್ನು ಯಾವ ಸ್ಥಾನಕ್ಕೆ ವರ್ಗಾಯಿಸಲಾಗಿದೆ ಎಂಬುದನ್ನು ಆದೇಶದಲ್ಲಿ ನಮೂದಿಸಿಲ್ಲ.

ಎಸಿಬಿ ಡಿಜಿಪಿಯಾಗಿ ಗುಪ್ತಚರ ಇಲಾಖೆ ಡಿಜಿಪಿ ಎಂ.ಎನ್‌.ರೆಡ್ಡಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಡಾ.ಎ.ಎಸ್‌.ಎನ್‌.ಮೂರ್ತಿ ಅವರನ್ನು ಅರಣ್ಯ ಘಟಕದ ಎಡಿಜಿಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ.

ಎಂ.ಎನ್‌.ರೆಡ್ಡಿ ಅವರ ಸ್ಥಾನಕ್ಕೆ ಗುಪ್ತಚರ ಇಲಾಖೆ ಐಜಿಪಿ ಅಮ್ರಿತ್‌ ಪೌಲ್‌  ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.

‍[related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT