ಸೋಮವಾರ, ಡಿಸೆಂಬರ್ 9, 2019
23 °C

ಭಾರತದ ಪ್ರತಿಮೆ ಮಾನವ

Published:
Updated:
ಭಾರತದ ಪ್ರತಿಮೆ ಮಾನವ

ಒಂದು ಗಂಟೆ ಒಂದೇ ಸ್ಥಳದಲ್ಲಿ ಅಲ್ಲಾಡದಂತೆ ಕೂರುವುದು ಎಂದರೆ ಕಷ್ಟ. ಅಂತಹುದರಲ್ಲಿ 54 ವರ್ಷ ವಯಸ್ಸಿನ ಅಬ್ದುಲ್ ಅಜೀಜ್ ಸತತ ಆರು ಗಂಟೆ ಒಂದೇ ಸ್ಥಳದಲ್ಲಿ ಪ್ರತಿಮೆಯಂತೆ ಕೂತಿರುತ್ತಾರೆ.

‘ಭಾರತದ ಪ್ರತಿಮೆ ಮಾನವ’ ಎಂದೇ ಖ್ಯಾತರಾಗಿರುವ ಇವರು 1985ರಿಂದ ಚೆನ್ನೈನ ‘ವಿಜಿಪಿ ಗೋಲ್ಡನ್ ಬೀಚ್’ ರೆಸ್ಟೊರೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ನಡುವೆ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದ, ರೆಸ್ಟೊರಂಟ್‌ ಮಾಲಿಕರು, ಅಲ್ಲಿನ ಬಕಿಂಗ್‌ಹ್ಯಾಮ್ ಅರಮನೆಯ ಹೊರಭಾಗದಲ್ಲಿನ ರಾಯಲ್ ಗಾರ್ಡ್‌ನಲ್ಲಿನ ಪ್ರತಿಮೆ ಸ್ವರೂಪದ ವ್ಯಕ್ತಿಯಿಂದ ಪ್ರಭಾವಿತರಾಗಿದ್ದರು. ನಂತರ ತಮ್ಮ ರೆಸ್ಟೊರೆಂಟ್‌ನಲ್ಲಿಯೂ ಈ ಮಾದರಿಯನ್ನು ಅನುಸರಿಸಲು ಅಲ್ಲಿನ ಸಿಬ್ಬಂದಿಗಳಿಗೆ ಮೂರು ತಿಂಗಳ ತರಬೇತಿ ನೀಡಿ, ಕಠಿಣ ಆಯ್ಕೆಯ ಮೂಲದ ಅಜೀಜ್ ಅವರನ್ನು ಈ ವೃತ್ತಿಗೆ ನೇಮಿಸಿಕೊಂಡರು.

ಇವರನ್ನು ಅಲುಗಾಡಿಸಲು ಜನರು ಮಾಡಿದ ಯಾವ ಪ್ರಯತ್ನಗಳು ಇದುವರೆಗೆ ಸಫಲವಾಗಲಿಲ್ಲ. ಎಷ್ಟೋ ಮಹಿಳೆಯರು ಅಬ್ದುಲ್ ಅವರನ್ನು ವಿಚಲಿತಗೊಳಿಸಲು ಮುತ್ತು ನೀಡಿದ್ದೂ ಇದೆ. ಆದರೂ ಅವರು ಜಪ್ಪಯ್ಯ ಅಂದಿಲ್ಲ!

‘ಪ್ರಾರಂಭದಲ್ಲಿ ನನಗೆ ಪ್ರತಿಮೆ ರೀತಿಯಲ್ಲಿ ನಿಂತು ಕಾರ್ಯ ನಿರ್ವಹಿಸುವುದು ಇಷ್ಟವಿರಲಿಲ್ಲ. ಆದರೆ, ನನ್ನ ಈ ವೃತ್ತಿಯನ್ನು ನಿರಾಕರಿಸಿ, ನಿರುದ್ಯೋಗಿಯಾಗಲು ಸಾಧ್ಯವಾಗಲಿಲ್ಲ. ಹಾಗಾಗಿ ಇದನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ಅಜೀಜ್‌.

ಪ್ರತಿಕ್ರಿಯಿಸಿ (+)