ಬುಧವಾರ, ಡಿಸೆಂಬರ್ 11, 2019
20 °C

ಭಾರತ – ಶ್ರೀಲಂಕಾ ಟೆಸ್ಟ್: ಮುರುಳಿ ವಿಜಯ್ ಸ್ಥಾನಕ್ಕೆ ಶಿಖರ್ ಧವನ್

Published:
Updated:
ಭಾರತ – ಶ್ರೀಲಂಕಾ ಟೆಸ್ಟ್: ಮುರುಳಿ ವಿಜಯ್ ಸ್ಥಾನಕ್ಕೆ ಶಿಖರ್ ಧವನ್

ನವದೆಹಲಿ: ಮಣಿಕಟ್ಟು ತೊಂದರೆಯಿಂದ ಬಳಲುತ್ತಿರುವ ಭಾರತದ ಆರಂಭಿಕ ಆಟಗಾರ ಮುರುಳಿ ವಿಜಯ್ ಇದೇ ತಿಂಗಳ 26 ರಂದು ನಡೆಯಲಿರುವ ಭಾರತ –ಶ್ರೀಲಂಕಾ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಶಿಖರ್ ಧವನ್ ಅವರ ಸ್ಥಾನ ತುಂಬಲಿದ್ದಾರೆ.

ಅಖಿಲ ಭಾರತೀಯ ಹಿರಿಯ ಆಟಗಾರರ ಆಯ್ಕೆ ಸಮಿತಿಯು ಮುಂಬರಲಿರುವ ಶ್ರೀಲಂಕಾ ಪ್ರವಾಸದ ಟೆಸ್ಟ್ ಪಂದ್ಯಗಳಲ್ಲಿ ವಿಜಯ್ ಸ್ಥಾನಕ್ಕೆ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿದೆ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದ್ದಾರೆ.

ಭಾರತದ ಏಕದಿನ ಕ್ರಿಕೆಟ್‌ ತಂಡದಲ್ಲಿ ಆಡುತ್ತಿರುವ ಧವನ್ ಈವರೆಗೂ 23 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 4 ಶತಕಗಳನ್ನೊಳಗೊಂಡಂತೆ  1464 ರನ್ ಗಳಿಸಿದ್ದು, 38.52 ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಭ್ಯಾಸ ಪಂದ್ಯದಲ್ಲಿ ಮುರಳಿ ವಿಜಯ್‌ ಮಣಿಕಟ್ಟು ತೊಂದರೆಗೆ ಒಳಗಾಗಿದ್ದರು.

ಭಾರತ –ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಆರ್ ಅಶ್ವಿನ್, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಇಶಾಂತ್ ಶರ್ಮ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಅಭಿನವ್‌ ಮುಕುಂದ್.

ಪ್ರತಿಕ್ರಿಯಿಸಿ (+)