ಭಾನುವಾರ, ಡಿಸೆಂಬರ್ 8, 2019
19 °C
ಆಸ್ತಿ ವಿಚಾರದಲ್ಲಿ ಜಗಳ

ಬಿಹಾರ: ಒಂದೇ ಕುಟುಂಬದ ನಾಲ್ವರನ್ನು ಬೆಂಕಿಹಚ್ಚಿ ಕೊಂದ ಸಹೋದರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬಿಹಾರ: ಒಂದೇ ಕುಟುಂಬದ ನಾಲ್ವರನ್ನು ಬೆಂಕಿಹಚ್ಚಿ ಕೊಂದ ಸಹೋದರ

ಬರ್ಸೋಯ್: ಆಸ್ತಿ ವಿಚಾರದಲ್ಲಿ ಇಬ್ಬರು ಸಹೋದರರ ನಡುವೆ ಬೆಳೆದ ಮನಸ್ತಾಪ ಇಬ್ಬರು ಅಪ್ರಾಪ್ತೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಬಲಿತೆಗೆದುಕೊಂಡ ದಾರುಣ ಘಟನೆ ಬಿಹಾರದ ಖೈತರ್‌ ಬಳಿಯಿರುವ ಚೌಂಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತರನ್ನು  ಕೇದರ್ ಸಿಂಗ್ (45), ಪತ್ನಿ ಪ್ರತಿಮಾ ದೇವಿ (40), ಇವರಿಬ್ಬರ ಮಕ್ಕಳಾದ ಡಿಂಪಲ್ ಕುಮಾರಿ (15), ಸೋನಿಕುಮಾರಿ (17) ಎಂದು ಗುರುತಿಸಲಾಗಿದೆ.

ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಮೃತ ಕೇದರ್ ಸಿಂಗ್ ಹಾಗೂ ತಮ್ಮ ಮನೋಜ್ ಕುಮಾರ್ ನಡುವೆ ಭಾನುವಾರ ಬೆಳಿಗ್ಗೆ ಜಗಳ ಆರಂಭವಾಗಿದೆ. ಈ ವೇಳೆ ತಮ್ಮ ಮನೋಜ್ ಇಡೀ ಕುಟುಂಬದವರ ಮೇಲೆ ಹಲ್ಲೆ ನಡೆಸಿ ಹೋಗಿದ್ದಾರೆ.

ಪುನಃ ರಾತ್ರಿ ಮನೆಗೆ ಬಂದ ಮನೋಜ್ ಕುಮಾರ್, ಅಣ್ಣ ಕೇದರ್ ಸಿಂಗ್ ಅವರ ಕುಟುಂಬ ಮಲಗಿದ್ದ ವೇಳೆ ಬೆಂಕಿ ಹಚ್ಚಿದ್ದಾನೆ.

ಈ ವೇಳೆ ಮೃತ ಕೇದರ್ ಮಗ ಲಕ್ಷ್ಮಣ್ ಕುಮಾರ್ ಬದುಕುಳಿದಿದ್ದು, ಚಿಕ್ಕಪ್ಪ ಮನೋಜ್ ಕುಮಾರ್‌ ಮೇಲೆ ಬರ್ಸೋಯ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆದರೆ ಆರೋಪಿ ಮನೋಜ್ ಕುಮಾರ್ ಪರಾರಿಯಾಗಿದ್ದಾನೆ ಎಂದು ಕೈತಾರ್ ಎಸ್‌ಪಿ ಸಿದ್ಧಾರ್ಥ ಮೋಹನ್ ಜೈನ್ ಹೇಳಿದ್ದಾರೆ.

ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಪ್ರತಿಕ್ರಿಯಿಸಿ (+)