ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ ಯುದ್ಧಕ್ಕೆ 3 ಲಕ್ಷಕ್ಕೂ ಹೆಚ್ಚು ಬಲಿ

Last Updated 17 ಜುಲೈ 2017, 16:47 IST
ಅಕ್ಷರ ಗಾತ್ರ

ಬೈರೂತ್‌: ಆರು ವರ್ಷಗಳ ಹಿಂದೆ ಸರ್ಕಾರದ ವಿರುದ್ಧ ಸಿರಿಯಾದಲ್ಲಿ ಆರಂಭವಾದ ಪ್ರತಿಭಟನೆ ಕ್ರಮೇಣ ಯುದ್ಧಕ್ಕೆ ತಿರುಗಿದ್ದರಿಂದ  ಮೂರು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಬ್ರಿಟನ್‌ನ ಮಾನವಹಕ್ಕು ರಕ್ಷಣೆ ವಿಚಕ್ಷಣಾ ದಳದ ಇತ್ತೀಚಿನ ವರದಿ ಉಲ್ಲೇಖಿಸಿದೆ.

ತನ್ನ ವರದಿಯಲ್ಲಿ, 2011ರ ಮಾರ್ಚ್‌ 15ರಿಂದ, 2017 ಜುಲೈ 15ರವರೆಗೆ ಒಟ್ಟು 3, 31,765 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದು, ಇದರಲ್ಲಿ 18,243 ಮಕ್ಕಳು ಮತ್ತು 11,427ಮಹಿಳೆಯರು ಸೇರಿದಂತೆ ಒಟ್ಟು 99,617 ನಾಗರಿಕರು ಮೃತಪಟ್ಟಿದ್ದಾರೆ.

ಒಟ್ಟು ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ನಾಗರಿಕರ ಸಾವಿನ ಪ್ರಮಾಣ ಮೂರನೇ ಒಂದರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಹಾಗೂ ಯುಎಸ್‌ ಬೆಂಬಲಿತ ಸಿರಿಯಾ ಪ್ರಜಾಪ್ರಭತ್ವ ಪಡೆಗಳ ಒಟ್ಟು 57 ಸಾವಿರ ಬಂಡುಕೋರರು ಈ ಅವಧಿಯಲ್ಲಿ ಹತ್ಯೆಯಾಗಿದ್ದಾರೆ. ಜಿಹಾದಿಗಳು ಸೇರಿದಂತೆ ಇಸ್ಲಾಮಿಕ್‌ ಸ್ಟೇಟ್ಸ್‌(ಐಎಸ್‌) ಹಾಗೂ ಆಲ್‌ಖೈದಾ ಸಂಘಟನೆಗಳ 58ಸಾವಿರಕ್ಕೂ ಹೆಚ್ಚು ಉಗ್ರರನ್ನು ಸಹ ಹೊಡೆದುರುಳಿಸಲಾಗಿದೆ.

ಜತೆಗೆ 1,16,774 ಜನ ಸರ್ಕಾರದ ಪರ ಹೋರಾಟಗಾರರು ಹಾಗೂ ಸೈನಿಕರು ಸಾವಿಗೀಡಾಗಿದ್ದು, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಇದರಿಂದಾಗಿ ಸಿರಿಯಾದ ಮೂಲಸೌಕರ್ಯ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT