ಶುಕ್ರವಾರ, ಡಿಸೆಂಬರ್ 6, 2019
18 °C

ಭಾರತದಲ್ಲಿಯೇ ಉತ್ಪಾದನಾ ಘಟಕ ಪ್ರಾರಂಭಿಸಬೇಕು; ಕರೆನ್ಸಿ ಸುರಕ್ಷತಾ ಅಂಶ ಪೂರೈಸುವ ಸಂಸ್ಥೆಗಳಿಗೆ ಆರ್‌ಬಿಐ ಸೂಚನೆ

Published:
Updated:
ಭಾರತದಲ್ಲಿಯೇ ಉತ್ಪಾದನಾ ಘಟಕ ಪ್ರಾರಂಭಿಸಬೇಕು; ಕರೆನ್ಸಿ ಸುರಕ್ಷತಾ ಅಂಶ ಪೂರೈಸುವ ಸಂಸ್ಥೆಗಳಿಗೆ ಆರ್‌ಬಿಐ ಸೂಚನೆ

ನವದೆಹಲಿ: ಮೇಕ್‌ ಇನ್‌ ಇಂಡಿಯಾಗೆ ಒತ್ತು ನೀಡುವ ನಿಟ್ಟಿನಲ್ಲಿ ದೇಶದ ಕರೆನ್ಸಿಯಲ್ಲಿನ ಸುರಕ್ಷತಾ ಅಂಶಗಳನ್ನು ಪೂರೈಸುವ ಸಂಸ್ಥೆಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಹೊಸ ಟೆಂಡರ್‌  ಪ್ರಕಟಿಸಿದ್ದು, ಭಾರತದಲ್ಲಿಯೇ ಉತ್ಪಾದನಾ ಘಟಕ ಸ್ಥಾಪಿಸಬೇಕು ಎಂದಿದೆ.

ನೂತನ ಟೆಂಡರ್‌ ಪ್ರಕಾರ, ಕರೆನ್ಸಿ ಸುರಕ್ಷತಾ ಅಂಶಗಳನ್ನು ಪೂರೈಸುವ ಸಂಸ್ಥೆಯು 2 ವರ್ಷಗಳ ಒಳಗಾಗಿ ದೇಶದಲ್ಲಿ ಉತ್ಪಾದನಾ ಘಟಕ ಆರಂಭಿಸಬೇಕು ಎಂದಿದೆ. ನೋಟುಗಳಿಗೆ ಅಗತ್ಯವಿರುವ ಫೈಬರ್‌ ಹಾಗೂ ಸುರಕ್ಷತಾ ಅಂಶಗಳ ಪೂರೈಕೆಗೆ ಈ ಹಿಂದೆ ಆಹ್ವಾನಿಸಿದ್ದ ಎರಡು ಟೆಂಡರ್‌ಗಳನ್ನು ಆರ್‌ಬಿಐ ರದ್ದುಪಡಿಸಿದೆ.

ಕರೆನ್ಸಿ ಸುರಕ್ಷತಾ ಕ್ರಮವಾಗಿ ಬಳಕೆಯಾಗುವ ವಿಶೇಷ ರೀತಿಯ ದಾರ, ಬಣ್ಣ ಬದಲಿಸುವ ಶಾಯಿ, ತೆಳುವಾದ ಲೋಹದ ಹಾಳೆ, ಫೈಬರ್‌, ಸೂಕ್ಷ್ಮ ರಂಧ್ರಗಳ ಮುದ್ರಣ ಪೂರೈಕೆಗಾಗಿ ಬಿಡ್ ಕರೆಯಲಾಗುತ್ತಿದೆ.

ಚೀನಾ, ಪಾಕಿಸ್ತಾನದಿಂದ ದೂರವಿರಬೇಕು: ಪಾಕಿಸ್ತಾನ ಅಥವಾ ಚೀನಾದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳ ಬಿಡ್‌ ಪರಿಗಣಿಸಲಾಗುವುದಿಲ್ಲ. ಈ ಯೋಜನೆಯಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಯು ಭಾಗಿಯಾಗುವಂತಿಲ್ಲ ಹಾಗೂ ಇಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯನ್ನು ಪಾಕಿಸ್ತಾನ ಅಥವಾ ಚೀನಾದಲ್ಲಿ ಕಾರ್ಯನಿರ್ವಹಣೆಗೆ ವರ್ಗಾವಣೆ ಮಾಡುವಂತಿಲ್ಲ ಎಂದು ಆರ್‌ಬಿಐ ಸೂಚನೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)