ಶುಕ್ರವಾರ, ಡಿಸೆಂಬರ್ 13, 2019
20 °C

ಜಿರಾಫೆ ಜೊತೆಗೆ ಸೆಲ್ಫಿ ತಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿರಾಫೆ ಜೊತೆಗೆ ಸೆಲ್ಫಿ ತಗೊಳ್ಳಿ

ಸಿಕ್ಕಸಿಕ್ಕ ಜಾಗದಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವುದು ಈಗ ಚಟವಾಗಿದೆ. ಈ ಅಂಶವನ್ನು ಗಮನಿಸಿ ಇಂಗ್ಲೆಂಡ್‌ನ ಜೋಕಪರ್ ಎಂಬ ಸಂಸ್ಥೆ 20 ಅಡಿ ಉದ್ದದ ಸೆಲ್ಫಿ ಸ್ಟಿಕ್‌ ಬಿಡುಗಡೆ ಮಾಡಿದೆ. ಇಷ್ಟು ಉದ್ದದ ಸೆಲ್ಫಿ ಸ್ಟಿಕ್‌ ತೆಗೆದುಕೊಂಡು ಜಿರಾಫೆಯ ಮುಖದೊಂದಿಗೆ ಸೆಲ್ಫಿ ತೆಗದುಕೊಳ್ಳಬೇಕಾ ಅನ್ನೋದು ನಿಮ್ಮ ಪ್ರಶ್ನೆಯಾ?

ಹೌದು ಕಣ್ರೀ. ಜಿರಾಫೆಯಷ್ಟೇ ಎತ್ತರದಲ್ಲಿ ಸೆಲ್ಫಿ ತೆಗೆದುಕೊಳ್ಳಲೆಂದೇ ತಯಾರಿಸಿರುವ ಸೆಲ್ಫಿ ಸ್ಟಿಕ್ ಇದು. ಲಂಡನ್‌ನಿಂದ 19 ಕಿ.ಮೀ ದೂರದಲ್ಲಿರುವ ಚೆಸಿಂಗ್ಟನ್ ವರ್ಲ್ಡ್ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ 20ಅಡಿ ಎತ್ತರದ ಸೆಲ್ಫಿ ಕೋಲನ್ನು ನೀಡುತ್ತಿದ್ದು, ಎತ್ತರದ ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದು.

ಈ ಕೋಲನ್ನು ವಿವಿಧ ಲೋಹದಿಂದ ಮಾಡಲಾಗಿದ್ದು ಮೇಲೆ ಹಸಿರು ಎಲೆಗಳಿಂದ ಅಲಂಕಾರ ಮಾಡಲಾಗಿದೆ. ಹಾಗೇ ಇದು ಹೆಚ್ಚು ಭಾರವಿಲ್ಲ. ಹಾಗಾಗಿ ಮಕ್ಕಳೂ, ವಯಸ್ಕರೂ ಬಳಸಬಹುದು. ಈ ಸ್ಟಿಕ್‌ನಿಂದ ಎತ್ತರದ ಬೆಟ್ಟ, ಪ್ರಾಣಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದು. ಇದರಿಂದ ಸುತ್ತಲಿನ ವಾತಾವರಣ ಸೆಲ್ಫಿ ಫೋಟೊ ಜೊತೆ ಬರುತ್ತದೆ.

ಈ ಸೆಲ್ಫಿ ಕೋಲಿನಿಂದಾಗಿ ಉದ್ಯಾನಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆಯಂತೆ. ಹಾಗೇ ಈ ಸೆಲ್ಫಿ ಕೋಲಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಭಾರತದ ಮಾರುಕಟ್ಟೆಗೆ ಈ ಸೆಲ್ಫ್ ಸ್ಟಿಕ್ ಬರುವುದು ಸಲ್ಪ ತಡವಾದರೂ ಇನ್ನೊಂದು ತಿಂಗಳಲ್ಲಿ ಬರಲಿದೆ. ಜೆರಾಫೆ ಜೊತೆ ಸೆಲ್ಫ್ ತೆಗೆದುಕೊಳ್ಳಲು ಸಿದ್ಧರಾಗಿ.

 

ಪ್ರತಿಕ್ರಿಯಿಸಿ (+)